ಅಕ್ರಮವಾಗಿ ಪಡೆದಿದ್ದ ವಿದ್ಯುತ್ ಸಂಪರ್ಕ ತೆರವು

ಹೂವಿನಹಡಗಲಿ ತಾಲೂಕಿನ ನವಲಿ ಗ್ರಾಮದ ಸಮೀಪ ಅಕ್ರಮವಾಗಿ ಪಡೆದಿದ್ದ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಲೈನ್‌ಮೆನ್ ಕಡಿತಗೊಳಿಸಿದರು.
ಹೂವಿನಹಡಗಲಿ ತಾಲೂಕಿನ ನವಲಿ ಗ್ರಾಮದ ಸಮೀಪ ಅಕ್ರಮವಾಗಿ ಪಡೆದಿದ್ದ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಲೈನ್‌ಮೆನ್ ಕಡಿತಗೊಳಿಸಿದರು.
Published on
ಹೂವಿನಡಹಗಲಿ: ಸಿಂಗಟಾಲೂರು ಏತನೀರಾವರಿ ಯೋಜನೆಯಿಂದ ಪಟ್ಟಣಕ್ಕೆ ನೀರೊದಗಿಸುವ ರಾಜವಾಳ ಸಮೀಪದ ಜಾಕ್‌ವೆಲ್‌ಗೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ಫಿಲ್ಟರ್ ವಿದ್ಯುತ್‌ಲೈನ್‌ಗೆ ಅಕ್ರಮವಾಗಿ ಪಡೆದಿದ್ದ ಸಂಪರ್ಕಗಳನ್ನು ಜೆಸ್ಕಾಂ ಅಧಿಕಾರಿಗಳು ತೆರವುಗೊಳಿಸಿದರು.
ಶಾಸಕ ಕೃಷ್ಣನಾಯ್ಕ ಅಧ್ಯಕ್ಷತೆಯಲ್ಲಿ ಈ ಕುರಿತು ಶನಿವಾರ ಜೆಸ್ಕಾಂ ಹಾಗೂ ಪುರಸಭೆ ಅಧಿಕಾರಿಗಳ ಸಭೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡರು. ತಾಲೂಕಿನ ಹೊನ್ನೂರು, ನವಲಿ, ಕೊಟ್ನೇಕಲ್, ರಾಜವಾಳ, ಸೇರಿದಂತೆ ಇತರೆಡೆ ಕೃಷಿ ಪಂಪ್‌ಸೆಟ್ ಹಾಗೂ ಪ್ರಭಾವಿಗಳ ಮನೆಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು.
ಪೋಟೊ-ಫೆ-09-ಎಚ್,ಡಿ,ಎಲ್- 01
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net