ಹಂಪಿ ಉತ್ಖನನದಲ್ಲಿ ಅಪರೂಪದ ಶಿಲ್ಪಗಳು ಪತ್ತೆ

ಹಂಪಿ ಉತ್ಖನನದಲ್ಲಿ ಅಪರೂಪದ ಸುಪ್ರಭಾತ, ನಾಗಿಣಿ ಶಿಲ್ಪಗಳು ಪತ್ತೆಯಾಗಿರುವುದು.
ಹಂಪಿ ಉತ್ಖನನದಲ್ಲಿ ಅಪರೂಪದ ಸುಪ್ರಭಾತ, ನಾಗಿಣಿ ಶಿಲ್ಪಗಳು ಪತ್ತೆಯಾಗಿರುವುದು.
Published on
ಹೊಸಪೇಟೆ: ಇತಿಹಾಸ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಆನೆಲಾಯದ ಹಿಂಭಾಗದಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನದಲ್ಲಿ ಮತ್ತಷ್ಟು ಐತಿಹಾಸಿಕ ವಿಸ್ಮಯಗಳು ಗೋಚರಿಸಿವೆ. ಜೈನ ತ್ರಿಕೂಟ ದೇಗುಲದ ಅವಶೇಷಗಳು ಪತ್ತೆಯಾದ ಬೆನ್ನಲ್ಲೇ, ಇದೀಗ ಕಲಾತ್ಮಕವಾದ ಸುಪ್ರಭಾತ, ನಾಗಿಣಿ ಹಾಗೂ ಗರುಡ ಶಿಲ್ಪಗಳು ಮಣ್ಣಿನಡಿಯಿಂದ ಹೊರಬಿದ್ದಿದ್ದು, ಇತಿಹಾಸಜ್ಞರಲ್ಲಿ ತೀವ್ರ ಕುತೂಹಲ ಮೂಡಿಸಿವೆ.
ಕೇಂದ್ರ ಪುರಾತತ್ವ ಇಲಾಖೆಯ (ಎಎಸ್ಐ) ಹಂಪಿ ವಲಯದ ಅಧೀಕ್ಷಕ ಕೊನುಡೂಲ ರಾಮಕೃಷ್ಣ ರೆಡ್ಡಿ ಅವರ ನೇತೃತ್ವದಲ್ಲಿ ಮೂರು ತಿಂಗಳಿನಿAದ ನಡೆಯುತ್ತಿರುವ ಜೀರ್ಣೋದ್ದಾರ ಮತ್ತು ಉತ್ಖನನ ಕಾರ್ಯಾಚರಣೆಯ ವೇಳೆ ಈ ಅಪರೂಪದ ಶಿಲ್ಪಗಳು ಲಭ್ಯವಾಗಿವೆ. ವಿಜಯನಗರ ಕಾಲದ ಧಾರ್ಮಿಕ ಭಕ್ತಿಭಾವ ಮತ್ತು ಮುಂಜಾನೆಯ ಆರಾಧನಾ ಪರಂಪರೆಯನ್ನು ಬಿಂಬಿಸುವ ವಿಶಿಷ್ಟ ಕಲಾಕೃತಿ. ನಾಗಾರಾಧನೆಯ ಕುರುಹಾಗಿರುವ ಈ ಶಿಲ್ಪವು ಅಂದಿನ ಸೂಕ್ಷ್ಮ ಕೆತ್ತನೆ ಹಾಗೂ ಶೈಲಿಗೆ ಕನ್ನಡಿ ಹಿಡಿದಿದೆ. ವೀರತ್ವ ಮತ್ತು ಭಕ್ತಿಯ ಸಂಕೇತವಾದ ಗರುಡನ ಮನಮೋಹಕ ಕಲ್ಲಿನ ರಚನೆ ಇದಾಗಿದೆ.
ಶತಮಾನಗಳ ಕಾಲ ಮಣ್ಣಿನಲ್ಲಿ ಹೂತುಹೋಗಿದ್ದ ಈ ದೇಗುಲ ಹಾಗೂ ಕಲಾಕೃತಿಗಳು, ವಿಜಯನಗರ ಕಾಲದಲ್ಲಿದ್ದ ವಾಸ್ತುಶಿಲ್ಪ ವೈಭವ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಮತ್ತೊಮ್ಮೆ ಜಗತ್ತಿನೆದುರು ಸಾಬೀತುಪಡಿಸಿವೆ. ಪ್ರಸ್ತುತ ಲಭ್ಯವಾಗಿರುವ ಶಿಲ್ಪಗಳನ್ನು ಪುರಾತತ್ವ ಇಲಾಖೆಯು ಸುರಕ್ಷಿತವಾಗಿ ಸಂರಕ್ಷಿಸಿದ್ದು, ಇವುಗಳ ಐತಿಹಾಸಿಕ ಹಿನ್ನೆಲೆಯ ಕುರಿತು ತಜ್ಞರು ಹೆಚ್ಚಿನ ಸಂಶೋಧನೆ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net