ದೇಶದ ಸಬಲೀಕರಣಕ್ಕೆ ಗುಣಮಟ್ಟದ ಶಿಕ್ಷಣ ಅಗತ್ಯ

ಸಿರಿಗೇರಿ ಸರ್ಕಾರಿ ಬಾಲಕರ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ 2005-06ನೇ ಸಾಲಿನ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಶ್ರೀರಾಮುಲು ಮಾತನಾಡಿದರು.  ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಗುರ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಶಿಕ್ಷಕರಾದ ರಜಿಯಾ ಸುಲ್ತಾನ, ವಾಣಿ, ಎಸ್‌ಡಿಎಂಸಿ ಅಧ್ಯಕ್ಷ ಬಿಚ್ಚುಗತ್ತಿ ಮಲ್ಲಯ್ಯ, ಬಿಆರ್‌ಸಿ ತಮ್ಮನ ಗೌಡ ಪಟೇಲ್, ಪ್ರಭಾರ ಮುಖ್ಯಶಿಕ್ಷಕ ವೆಂಕಟೇಶ್, ಶಿಕ್ಷಕ ವೃಂದ ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಶಿಕ್ಷಕ ಶ್ರೀರಾಮುಲು ಅಭಿಮತ
  • ಸಿರಿಗೇರಿಯಲ್ಲಿ ಗುರುವಂದನಾ ಸಮಾರಂಭ

ಸಿರಿಗೇರಿ: ದೇಶವು ಪ್ರಗತಿಯ ಉತ್ತುಂಗಕ್ಕೇರಲು ಮತ್ತು ಸಬಲವಾಗಿ ರೂಪುಗೊಳ್ಳಲು ಗುಣಮಟ್ಟದ ಶಿಕ್ಷಣ ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಯುವಜನತೆಯ ಪಾತ್ರ ನಿರ್ಣಾಯಕ ಎಂದು ನಿವೃತ್ತ ಹಿರಿಯ ಮುಖ್ಯ ಶಿಕ್ಷಕ ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯ ಸರ್ಕಾರಿ ಬಾಲಕರ ಪ್ರೌಢಶಾಲೆಯ 2005-06ನೇ ಸಾಲಿನ ವಿದ್ಯಾರ್ಥಿಗಳಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಲಕರು ತಮ್ಮ ಮಕ್ಕಳನ್ನೇ ಅತ್ಯಮೂಲ್ಯ ಆಸ್ತಿಯನ್ನಾಗಿ ರೂಪಿಸಬೇಕು. ಇದು ಮುಂದೊಂದು ದಿನ ಅವರಿಗೆ ಬೆಲೆಬಾಳುವ ಸಂಪತ್ತಾಗಿ ಮಾರ್ಪಡುತ್ತದೆ ಎಂದರು.
ಮುಖ್ಯ ಶಿಕ್ಷಕ ಪರಶುರಾಮ್ ಮಾತನಾಡಿ, ಯಾವುದೇ ಪ್ರಶಸ್ತಿಗಳಿಗಿಂತ ವಿದ್ಯಾರ್ಥಿಗಳು ಗುರುಗಳನ್ನು ಆದರಿಸುವುದೇ ಅತ್ಯಂತ ದೊಡ್ಡ ಗೌರವ. ಇಂದಿನ ದಿನಗಳಲ್ಲಿ ಸಮಾಜದಲ್ಲಿ ರೈತರು, ದಿನಸಿ ಅಂಗಡಿ ಮಾಲೀಕರು, ತರಕಾರಿ ವ್ಯಾಪಾರಿಗಳು ಮುಂತಾದ ವಿವಿಧ ವೃತ್ತಿಗಳಲ್ಲಿ ತಮ್ಮ ಬದುಕನ್ನು ಪ್ರಾಮಾಣಿಕವಾಗಿ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಪ್ರತಿಯೊಬ್ಬರೂ ನಿಜವಾದ ಸಾಧಕರೇ. ಕೆಲಸದಲ್ಲಿ ಯಾವುದೇ ಕೀಳರಿಮೆ ಬೇಡ, ಕಾಯಕವೇ ನಿರಂತರವಾಗಿರಲಿ ಎಂದು ಕಿವಿಮಾತು ಹೇಳಿದರು.
ನಿವೃತ್ತ ಹಿರಿಯ ಶಿಕ್ಷಕ ಎರ‌್ರಿಸ್ವಾಮಿ ಮತ್ತು ಹುಲುಗಪ್ಪ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಹಳೆಯ ವಿದ್ಯಾರ್ಥಿಗಳು ನೆಚ್ಚಿನ ಗುರುಗಳನ್ನು ನಾಗನಾಥೇಶ್ವರ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಪಾದಗಳಿಗೆ ಪುಷ್ಪಗಳನ್ನು ಅರ್ಪಿಸುತ್ತಾ, ಅದ್ದೂರಿ ಮೆರವಣಿಗೆಯ ಮೂಲಕ ವೇದಿಕೆಗೆ ಗೌರವಪೂರ್ವಕವಾಗಿ ಕರೆತಂದರು. ನಂತರ ಶಿಕ್ಷಕರು ಹಾಗೂ ಡಿ ಗ್ರೂಪ್ ನೌಕರರನ್ನು ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net