ವಿದ್ಯಾರ್ಥಿಗಳಲ್ಲಿ ಸಮಯಪಾಲನೆ ಮುಖ್ಯ

 ಕೊಟ್ಟೂರಿನ ಗೊರ್ಲಿ ಶರಣಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನ ಸನ್ಮಾನಿಸಲಾಯಿತು.
ಕೊಟ್ಟೂರಿನ ಗೊರ್ಲಿ ಶರಣಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನ ಸನ್ಮಾನಿಸಲಾಯಿತು.
Published on
ಕೊಟ್ಟೂರು: ಕಡುಬಡತನದಲ್ಲಿ ಹುಟ್ಟಿ, ವಿದ್ಯೆಯ ಮೇರು ಪರ್ವತ ಏರಿದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಜಗತ್ತಿನ ಹಲವು ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಪದವಿ ನೀಡಿ ಗೌರವಿಸಿವೆ. ಇದಕ್ಕೆ ಅವರು ಪಡೆದ ವಿದ್ಯೆ ಕಾರಣ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ಗೊರ್ಲಿ ಶರಣಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 2026-27 ನೇ ಸಾಲಿನ ಸಾಂಸ್ಕೃತಿಕ ಸಮಿತಿಗಳ ಕಾರ್ಯಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಓದುವ ಮನಸ್ಸಿದ್ದರೆ ಬಡತನ ಅಡ್ಡಿ ಬರಲಾರದು. ಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಡಬೇಕು. ಹಲವು ಮಹನೀಯರು ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಮಟ್ಟಕ್ಕೆ ಏರಿದ್ದಾರೆ ಎಂದರು.
ವಿದ್ಯಾರ್ಥಿಗಳಲ್ಲಿ ಸಮಯ ಪಾಲನೆ ಬಹಳ ಮುಖ್ಯ. ಶ್ರದ್ಧೆಯಿಂದ ಓದುವ ಮೂಲಕ ತಂದೆ-ತಾಯಿ ಕನಸನ್ನು ನನಸು ಮಾಡಿ. ನಾನು ಈ ಮಟ್ಟಕ್ಕೆ ಇರಲು ನನ್ನ ಗುರುಗಳೇ ಕಾರಣ. ಎಂದಿಗೂ ಗುರುಗಳ ಮಾತನ್ನು ಮೀರದೆ ವಿದ್ಯೆ ಕಲಿತಾಗ ಜೀವನದಲ್ಲಿ ಎಲ್ಲ ಗೌರವಗಳನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಎಚ್.ಎಂ.ರವೀಂದ್ರಸ್ವಾಮಿ, ಪ್ರಾಚಾರ್ಯ ಡಾ.ಜಿ.ಸೋಮಶೇಖರಪ್ಪ, ಉಪನ್ಯಾಸಕರಾದ ಸಿದ್ದಲಿಂಗನಗೌಡ , ಸಕ್ರಪ್ಪ ರಡ್ಡೇರ, ಅಂಜಿನಪ್ಪ ಡಿ., ಕೆ.ಎಂ.ರೇಣುಕಾಸ್ವಾಮಿ, ಎಂ.ಜಯಣ್ಣ, ಕರಿಬಸಪ್ಪ ಜಿ., ಗುರಪ್ಪ ನಾಯಕ, ಎಂ.ಬಸವರಾಜ, ಪ್ರವೀಣ್ ಕುಮಾರ್, ತುಷಾರ್, ಶಶಿರೇಖಾ, ಕೆ.ಎಂ.ಮಂಜುಳಾ, ನಿವೃತ್ತ ಉಪನ್ಯಾಸಕರಾದ ಶಿವರಾಜ್ ಜಿ., ಎಸ್ಡಿಎಂಸಿ ಸದಸ್ಯರಾದ ಡಿ.ಸಿ.ಮಂಜುನಾಥ, ಹಡಪದ ಪ್ರಕಾಶ, ಕೊಟ್ರೇಶ, ಪಾರ್ವತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net