ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಪೂಜೆ

ಶ್ರೀರಾಮ ನವಮಿ ಪ್ರಯುಕ್ತ ಕೊಟ್ಟೂರಿನ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಶ್ರೀರಾಮ, ಸೀತೆ ಮೂರ್ತಿಗಳನ್ನು ಆಭರಣ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಶ್ರೀರಾಮ ನವಮಿ ಪ್ರಯುಕ್ತ ಕೊಟ್ಟೂರಿನ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಶ್ರೀರಾಮ, ಸೀತೆ ಮೂರ್ತಿಗಳನ್ನು ಆಭರಣ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
Published on
ಕೊಟ್ಟೂರು: ಶ್ರೀರಾಮ ನವಮಿ ಪ್ರಯುಕ್ತ ಪಟ್ಟಣದ ಶ್ರೀ ರುಕ್ಮಿಣಿ ಪಾಂಡುರಂಗ ಮಂದಿರದಲ್ಲಿ ಶುಕ್ರವಾರ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿದವು.
ಪಟ್ಟಣದ ನೂರಾರು ಭಕ್ತರು ಬೆಳಿಗ್ಗೆಯಿಂದ ದೇವಸ್ಥಾನಕ್ಕೆ ಆಗಮಿಸಿ ಶ್ರೀ ಪಾಂಡುರಂಗ ರುಕ್ಮಿಣಿ ದರ್ಶನ ಪಡೆದುಕೊಂಡು ಪುನೀತರಾದರು. ಅರ್ಚಕರು ಶ್ರೀ ಶೇಷಾಚಲ ಭಟ್ಟರು ಪೂಜೆ ನೆರವೇರಿಸಿದರು ಮಧ್ಯಾಹ್ನ ಸಕಲ ಭಕ್ತಾದಿಗಳಿಗೆ ಕೋಸಂಬರಿ ಪಾನಕ ವಿತರಿಸಲಾಯಿತು. ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಪಿ.ಪ್ರಭುದೇವ್. ಉಪಾಧ್ಯಕ್ಷ ಡೋಂಗ್ರೆ ವಿಜಯಕುಮಾರ್, ಕಾರ್ಯದರ್ಶಿ ಲೋಕರೆ ವಾಸುದೇವರಾವ್, ಹವಳೆ ಕೊಟ್ರೇಶ್, ಲೋಕರೆ ರಮೇಶ್ ರಾವ್, ಸುಲಕೆ ಸುರೇಶ್ ರಾವ್, ರಾಂಪುರೆ ಮಾರುತಿರಾವ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net