ಕೂಡ್ಲಿಗಿ: ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮಗಳ ಜನರ ನಡೆ ಗ್ರಾಪಂ ಕಡೆ ಘೋಷಣೆಯೊಂದಿಗೆ ಸಿಪಿಐ ಪದಾಧಿಕಾರಿಗಳು ಗಂಡಬೊಮ್ಮನಹಳ್ಳಿ ಗ್ರಾಪಂ ಕಾರ್ಯದರ್ಶಿ ಈಶ್ವರಯ್ಯಗೆ ಸೋಮವಾರ ಮನವಿ ಸಲ್ಲಿಸಿದರು.
ಪಕ್ಷದ ತಾಲೂಕು ಕಾರ್ಯದರ್ಶಿ ಕರಿಯಪ್ಪ ಮಾತನಾಡಿ, ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ವಸತಿ ನಿವೇಶನ, ರಸ್ತೆ, ಕಾಲುವೆ, ವಿದ್ಯುತ್, ಗ್ರಂಥಾಲಯ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇನ್ನಿತರ ಸೌಲಭ್ಯಗಳಿಗಾಗಿ ಹೋರಾಟ ಕೈಗೊಂಡಿದ್ದೇವೆ. ಗಂಡಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳ ಬಡವರಿಗೆ ಸರ್ಕಾರದ ಆಶ್ರಯ ಯೋಜನೆಯಡಿ ನಿವೇಶನ ಮತ್ತು ವಸತಿ ಕಲ್ಪಿಸಬೇಕು. ಗ್ರಾಮಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ವಿದ್ಯುತ್ ಕಂಬಗಳನ್ನು ಅಳವಡಿಸಿ ದೀಪಗಳನ್ನು ಹಾಕಿಸಬೇಕು. ರೈತರು ಜಮೀನುಗಳಿಗೆ ಹೋಗಿಬರಲು ದಾರಿ ಬಿಡಿಸಿಕೊಡಬೇಕು. ಹಳ್ಳಿಗಳ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಚರಂಡಿ ಮತ್ತು ಸಾರ್ವಜನಿಕ ಶೌಚಗೃಹಗಳ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಸಹ ಕಾರ್ಯದರ್ಶಿ ಎಚ್.ಪಿ.ಪಾಲಯ್ಯ, ಎಐವೈಎಫ್ ತಾಲೂಕು ಅಧ್ಯಕ್ಷ ಮಂಜು, ಎನ್‌ಎಫ್‌ಐಡಬ್ಲುೃ ತಾಲೂಕು ಅಧ್ಯಕ್ಷೆ ಮಮತಾ, ಪ್ರಮುಖರಾದ ಚಂದ್ರು, ಭಾಗ್ಯಮ್ಮ, ಪಾರ್ವತಿ, ನಾಗಮ್ಮ, ತಾಯಮ್ಮ, ಮಂಜುಳಾ, ಬೊಮ್ಮಕ್ಕ, ಜ್ಯೋತಿ, ಮಹಾಲಕ್ಷ್ಮೀ ಇತರರಿದ್ದರು.