ಸ್ಥಳೀಯ ರೈತರಿಗೆ ಮಾರುಕಟ್ಟೆ ಒದಗಿಸಿ

ಸಂಡೂರು ಎಪಿಎಂಸಿ ಬಳಿಯ ವಾರದ ಸಂತೆ ಮಾರುಕಟ್ಟೆಯಲ್ಲಿ ಸ್ಥಳಿಯ ರೈತರಿಗೆ ಅವಕಾಶ ಮಾಡಿ ಕೊಡಲು ಆಗ್ರಹಿಸಿ ಕರ್ನಾಟಕ ರೈತ ಸಂಘದಿಂದ ಪುರಸಭೆ ಮುಖ್ಯಾಧಿಕಾರಿ ಬಿ.ವಿನಯಕುಮಾರ್‌ಗೌಡಗೆ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಮೇಟಿ, ಉಪಾಧ್ಯಕ್ಷರಾದ ಕಾಡಪ್ಪ, ಪರಮೇಶ್ವರಪ್ಪ, ಗ್ರಾಮ ಘಟಕದ ಅಧ್ಯಕ್ಷರಾದ ಷಣ್ಮುಖಪ್ಪ, ಮಂಜುನಾಥ ಪಾಟೀಲ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಮುಖ್ಯಾಧಿಕಾರಿಗೆ ಮನವಿ
  • ಸಂಡೂರು ಕರ್ನಾಟಕ ರೈತ ಸಂಘ ಆಗ್ರಹ
ಸಂಡೂರು: ತಾಲೂಕು ಎಪಿಎಂಸಿ ಬಳಿಯ ಭಾನುವಾರಕ್ಕೊಮ್ಮೆ ನಡೆಯುವ ಸಂತೆ ಮಾರುಕಟ್ಟೆಯಲ್ಲಿ ಸ್ಥಳಿಯ ರೈತರಿಗೆ ಅವಕಾಶ ಮಾಡಿ ಕೊಡಲು ಆಗ್ರಹಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ಬಿ.ವಿನಯಕುಮಾರ್ ಗೌಡಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಮೇಟಿ ಮಾತನಾಡಿ, ಸಂಡೂರು ಹಾಗೂ ಸುತ್ತಲಿನ ಪ್ರದೇಶಗಳಿಂದ ರೈತರು ಸಂತೆ ಮಾರುಕಟ್ಟೆಗೆ ವ್ಯಾಪಾರಕ್ಕಾಗಿ ತರಕಾರಿ, ದವಸ-ಧಾನ್ಯಗಳನ್ನು ತರುತ್ತಾರೆ. ಆದರೆ, ಸ್ಥಳದ ಅಭಾವದಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದ್ದು, ತ್ವರಿತವಾಗಿ ಪ್ರತ್ಯೇಕ ಸಂತೆ ಮಾರುಕಟ್ಟೆ ಮಾಡಿಕೊಟ್ಟರೆ ಅನುಕೂಲವಾಗಲಿದೆ ಎಂದರು.
ಮಾರುಕಟ್ಟೆ ಒದಗಿಸುವ ಬಗ್ಗೆ ಸಂಸದ ಈ.ತುಕಾರಾಮ್ ಅವರು ಶಾಸಕರಿದ್ದಾಗ ಕೊಟ್ಟಿದ್ದ ಭರವಸೆ ಇನ್ನೂ ಈಡೇರಿಲ್ಲ. ಶೀಘ್ರವೇ ಮಾರುಕಟ್ಟೆ ಒದಗಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ರೈತ ಸಂಘದಿಂದ ಎಪಿಎಂಸಿ ಮಾರುಕಟ್ಟೆ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಮೇಟಿ, ಉಪಾಧ್ಯಕ್ಷರಾದ ಕಾಡಪ್ಪ, ಪರಮೇಶ್ವರಪ್ಪ, ಗ್ರಾಮ ಘಟಕದ ಅಧ್ಯಕ್ಷರಾದ ಷಣ್ಮುಖಪ್ಪ, ಮಂಜುನಾಥ ಪಾಟೀಲ, ಪ್ರಮುಖರಾದ ಎಂ.ಶಿವಣ್ಣ, ಎಂ.ಮಂಜುನಾಥ, ಪ್ರಶಾಂತ, ಟಿ.ಕಾರ್ತಿಕ್, ಆರ್.ವಿಶ್ವನಾಥ, ಭೀಮ, ಗಣೇಶನಾಯ್ಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net