ಲಾಕಪ್ ಡೆತ್ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಿ

ಹೊಸಪೇಟೆ ಟಿಬಿಡ್ಯಾಂ ವೈಕುಂಠ ಅತಿಥಿ ಗೃಹದಲ್ಲಿ ಮಂಗಳವಾರ ಎಸ್ ಡಿಪಿಐ ಎಸ್‌ಡಿಪಿಐ ಪಕ್ಷದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್.ಬಸವಂತಪ್ಪ ಅವರನ್ನು ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಮೃತ ಖಲೀಲ್ ರವರ ಪತ್ನಿ ಶೈನಜ್, ಮಕ್ಕಳಾದ ಮಹಮ್ಮದ್ ಹಾಷೀಮ್, ಶಿಫಾ, ಪ್ರಮುಖರಾದ ಫಯಾಜ್ ಮೌಲಾನಾ, ಸದ್ದಾಂ ಹಂಪಿ, ಮಹಮ್ಮದ್ ಜಾಫರ್, ಕೆ.ಜಿಲಾನ್ ಇತರರಿದ್ದರು.

Published on
ಹೊಸಪೇಟೆ: ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಖಲೀಲ್ ಅವರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬAಧಿಸಿದAತೆ ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಹಾಗೂ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿ ಎಸ್ ಡಿಪಿಐ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್.ಬಸವಂತಪ್ಪ ಅವರನ್ನು ಮನವಿ ಸಲ್ಲಿಸಿತು.
ನಗರದ ಟಿಬಿಡ್ಯಾಂ ವೈಕುಂಠ ಅತಿಥಿ ಗೃಹದಲ್ಲಿ ಮಂಗಳವಾರ ಮನವಿ ಸಲ್ಲಿಸಿ, ಮೃತನ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಸರ್ಕಾರ ಕೂಡಲೇ ಸೂಕ್ತ ನೆರವು ನೀಡಬೇಕು ಎಂದು ನಿಯೋಗ ಒತ್ತಾಯಿಸಲಾಯಿತು.
ಕೇವಲ ಸಿಬ್ಬಂದಿಯ ಅಮಾನತಿನಿಂದ ನ್ಯಾಯ ಸಿಗುವುದಿಲ್ಲ; ಕರ್ತವ್ಯದಲ್ಲಿದ್ದ ಠಾಣಾಧಿಕಾರಿ ಸೇರಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಎಸ್ ಡಿಪಿಐ ಆಗ್ರಹಿಸಿದೆ. ಮೃತ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಲಾಯಿತು.
ಮನವಿಗೆ ಸ್ಪಂದಿಸಿದ ಸಚಿವರು, ಮೃತನ ಪತ್ನಿಗೆ ತಾತ್ಕಾಲಿಕ ಉದ್ಯೋಗ ಕಲ್ಪಿಸಲು ಹಾಗೂ ಮಕ್ಕಳನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಾಖಲಿಸಲು ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net