ದೇಶವು ಭೌಗೋಳಿಕ, ಸಾಮಾಜಿಕ ಮತ್ತು ಪ್ರಾದೇಶಿಕವಾಗಿ ಭಿನ್ನವಾಗಿದೆ. ಜನಗಣತಿ ಕಾರ್ಯ ದೇಶದ ಪ್ರಗತಿಗೆ ಅತ್ಯಂತ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಗಣತಿದಾರರು ಸೇರಿ ಸರಿಯಾದ ಮಾಹಿತಿಯನ್ನಾಧಾರಿತ ಜನಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ. ದೇಶದಾದ್ಯಂತ ಇದೇ ಮೊದಲ ಬಾರಿಗೆ 2027ರ ಜನಗಣತಿಯು ಮೊಬೈಲ್ ಆಪ್ ಮೂಲಕ ಡಿಜಿಟಲ್ ಮೊಡ್‌ನಲ್ಲಿ ನಡೆಯಲಿದೆ. ಆದ್ದರಿಂದ ಅಧಿಕಾರಿಗಳು ನಿಖರ ಮತ್ತು ಸ್ಪಷ್ಟವಾಗಿ ಪಾರದರ್ಶಕತೆ ದತ್ತಾಂಶ ಸಂಗ್ರಹಿಸಬೇಕು. ಗಣತಿ ಕಾರ್ಯಕ್ಕೆ ಎಣಿಕೆದಾರರು, ಮೇಲ್ವಿಚಾರಕರನ್ನು ಗ್ರಾಮೀಣ ಭಾಗಕ್ಕೆ 6, ನಗರ ಭಾಗದಲ್ಲಿ 8 ಅಧಿಕಾರಿಗಳನ್ನು ನೇಮಿಸಲಾಗಿದೆ. ಗಣತಿ ಕಾರ್ಯದ ವೇಳೆ ಗೊಂದಲಗಳು ಉಂಟಾದಲ್ಲಿ ಮೇಲ್ವಿಚಾರನ್ನು ಅಥವಾ ಮೇಲಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದರು.