

ಪ್ರಮುಖ ಮುಖ್ಯಾಂಶಗಳು
ಹೊಸಪೇಟೆ: ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಕನ್ನಡ ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದ ಮುಂದೆ ವಿದ್ಯಾರ್ಥಿಗಳು ಶನಿವಾರ ಸಂಜೆ ದಿಡೀರ್ ಪ್ರತಿಭಟನೆ ನಡೆಸಿದರು.
ಹಾಸ್ಟೇಲ್ನಲ್ಲಿ 140 ವಿದ್ಯಾರ್ಥಿಗಳಿರುವ ನಿಲಯದಲ್ಲಿ ಕುಡಿವ ನೀರು, ಶೌಚಗೃಹ, ಊಟದ ವ್ಯವಸ್ಧೆ, ಸ್ವಚ್ಛತೆ ಸೇರಿ ಮೂಲ ಸೌಲಭ್ಯಗಳು ವಸತಿ ನಿಲಯದಲ್ಲಿ ಮರಿಚಿಕೆಯಾಗಿವೆ. ಸಂಬAದಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಸಮಸ್ಯೆ ಬಗೆಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ 9ಕ್ಕೆ ನೀಡುವ ಉಪಹಾರ 10ಕ್ಕೆ ಕೊಡುತ್ತಾರೆ. ರಾತ್ರಿ ಊಟವನ್ನು ಮದ್ಯಾಹ್ನ ಮಾಡಿ ಹೋಗುತ್ತಾರೆ. ರಾತ್ರಿ ವೇಳೆಗೆ ಕೆಲವೊಮ್ಮೆ ಹಾಳಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಗುಣಮಟ್ಟದ ಊಟ ಸಿಗದೇ ಊಟ ಸಿಗಲ್ಲ. ವಸತಿ ನಿಲಯದಲ್ಲಿ ಸ್ವಚ್ಛತೆ ಇಲ್ಲದಿರುವುರಿಂದ ಜ್ವರ, ನೆಗಡಿ, ಕೆಮ್ಮು, ಸೇರಿ ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳು ಆಸ್ಪತ್ರೆ ಸೇರುತ್ತಿದ್ದಾರೆ. ಶೌಚಗೃಹದಲ್ಲಿ ನೀರಿಲ್ಲದೇ ಬಹಿರ್ದೇಸೆಗೆ ಹೊರಗೆ ಹೋಗುವ ಸ್ಥಿತಿಯಿದೆ. ಜತೆಗೆ ಕಾಡು ಪ್ರಾಣಿಗಳು ಸೇರಿ ವಿಷ ಜಂತುಗಳ ಹಾವಳಿ ಹೆಚ್ಚಿದೆ. ಬೆಳಕಿನ ವ್ಯವಸ್ಥೆಯಿಲ್ಲ, ಗ್ರಂಥಾಲಯ ಉದ್ಘಾಟನೆಯಾಗಿಲ್ಲ. ಬೆಳಗ್ಗೆ ದಿನ ಪತ್ರಿಕೆ ಬರಲ್ಲ. ಕಳೆದ ನಾಲ್ಕೆöÊದು ವರ್ಷಗಳಿಂದ ಸಮಸ್ಯೆ ಮಿತಿ ಮೀರುತ್ತಿದೆ. ಇಲ್ಲಿನ ವಿದ್ಯಾರ್ಥಿಗಳ ಗೋಳು ಕೇಳುವವರು ಇಲ್ಲದಂತಾಗಿದೆ ಎಂದು ದೂರಿದರು.
ಸಂಬAಧಪಟ್ಟ ಅಧಿಕಾರಿಗಳು ವಸತಿ ನಿಲಯದ ಸಮಸ್ಯೆ ಬಗೆಹರಿಸಿಬೇಕು, ಜತೆಗೆ ಪಿಎಚ್ಡಿ ವಿದ್ಯಾರ್ಥಿಗಳಿಗೆ ನಿಲಯ ಪ್ರವೇಶಕ್ಕೆ 28 ವರ್ಷ ಮಿತಿಗೊಳಿಸಿದ ನಿಯಮವನ್ನು ಕೈ ಬಿಡಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ, ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.