ರಸಗೊಬ್ಬರ ಸಮರ್ಪಕ ಪೂರೈಸಲಿ

ಕಂಪ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಟಿ.ಗಂಗಣ್ಣ, ವಿ.ಟಿ.ನಾಗರಾಜ, ಗಫೂರಸಾಬ್, ಅಯ್ಯೋದಿ ವಿರುಪಣ್ಣ, ಎಸ್.ಮಲ್ಲಯ್ಯ, ಗಂಗಣ್ಣ ಇತರರಿದ್ದರು.
ಕಂಪ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಟಿ.ಗಂಗಣ್ಣ, ವಿ.ಟಿ.ನಾಗರಾಜ, ಗಫೂರಸಾಬ್, ಅಯ್ಯೋದಿ ವಿರುಪಣ್ಣ, ಎಸ್.ಮಲ್ಲಯ್ಯ, ಗಂಗಣ್ಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯೂರಿಯಾ
  • ರಸಗೊಬ್ಬರ
  • ನಿಗದಿ
ಕಂಪ್ಲಿ: ರಸಗೊಬ್ಬರ ಜತೆ ಅವಶ್ಯವಿಲ್ಲದ ಲಿಂಕ್ ಗೊಬ್ಬರ ಖರೀದಿಸಲು ಒತ್ತಾಯಿಸುವ ಕೃಷಿ ಪರಿಕರ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಸೋಮವಾರ ಮನವಿ ಸಲ್ಲಿಸಿದರು.
ನಗರ ಘಟಕದ ಅಧ್ಯಕ್ಷ ತಿಮ್ಮಪ್ಪ ನಾಯಕ ಹಾಗೂ ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ ಮಾತನಾಡಿ, ಎಫ್‌ಐಡಿ ಮೂಲಕ ಪ್ರತಿ ಎಕರೆಗೆ ಪ್ರತಿ ತಿಂಗಳಿಗೆ ಒಂದು ಚೀಲ ಯೂರಿಯಾ ರಸಗೊಬ್ಬರ ನಿಗದಿಪಡಿಸಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ರೈತರ ಬೆಳೆಯ ಅವಶ್ಯಕತೆಗೆ ತಕ್ಕಷ್ಟು ರಸಗೊಬ್ಬರ ಒದಗಿಸಬೇಕು. ಒಂದು ಚೀಲ ಯೂರಿಯಾದ ಜತೆಗೆ ನಾಲ್ಕು ಚೀಲ ಕಾಂಪ್ಲೆಕ್ಸ್ ತೆಗೆದುಕೊಳ್ಳುವಂತೆ ಅಂಗಡಿ ಮಾಲೀಕರು ರೈತರಿಗೆ ಒತ್ತಾಯಿಸುತ್ತಿದ್ದಾರೆ. ಅವಶ್ಯವಿಲ್ಲದ ಗೊಬ್ಬರ ಖರೀದಿಸುವುದರಿಂದ ರೈತರಿಗೆ ಆರ್ಥಿಕ ನಷ್ಟವಾಗುತ್ತಿದೆ ಎಂದರು.
ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಿಸಬೇಕು. ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಕ್ಯಾನಿಗೆ ಹಾಕಿ ಕೊಡುವುದನ್ನು ನಿಷೇಧಿಸಿದ್ದರಿಂದ ಕೃಷಿ ವಾಹನಗಳ ಚಾಲನೆಗೆ ತೊಂದರೆಯಾಗುತ್ತಿದೆ. ವ್ಹೀಲ್ ಅಳಡಿಸಿದ ಟ್ರ್ಯಾಕ್ಟರನ್ನು ಇಂಧನ ತುಂಬಿಸಿಕೊಳ್ಳಲು ರಸ್ತೆ ಮೇಲೆ ಚಲಾಯಿಸಿದಾಗ ರಸ್ತೆ ಗುಣಮಟ್ಟ ಹಾಳಾಗುತ್ತದೆ. ಇಂತಹ ತೊಂದರೆ ನಿವಾರಿಸಲು ಬಂಕ್‌ಗಳಲ್ಲಿ ಕ್ಯಾನ್‌ಗೆ ಇಂಧನ ತುಂಬಿಕೊಡುವಂತೆ ಸರ್ಕಾರ ಆದೇಶಿಸಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net