ರಸ್ತೆಯ ಕಂದಕ ಮುಚ್ಚುವಂತೆ ಪ್ರತಿಭಟನೆ

ಹೊಸಪೇಟೆಯ ಧೋಬಿ ಘಾಟ್ ಬಳಿಯ ರಸ್ತೆಯ ಸೇತುವೆಗೆ ದೊಡ್ಡ ಕಂದಕ ಬಿದಿದ್ದು ಅದನ್ನು ಸರಿಪಡಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ಸೇನೆ ಯುವ ಘಟಕದಿಂದ ಪ್ರತಿಭಟನೆ ಮಾಡಲಾಯಿತು. ಪ್ರಮುಖರಾದ ಹೊನ್ನೂರಸ್ವಾಮಿ, ಪಿ.ವೆಂಕಟೇಶ್, ಗುಜ್ಜಲ್ ಗಣೇಶ್, ಪಿ.ಶೇಕ್ಷಾವಲಿ, ಹನುಮಂತ, ರವಿಕುಮಾರ ಸೇರಿದಂತೆ ಇತರರಿದ್ದರು.
ಹೊಸಪೇಟೆಯ ಧೋಬಿ ಘಾಟ್ ಬಳಿಯ ರಸ್ತೆಯ ಸೇತುವೆಗೆ ದೊಡ್ಡ ಕಂದಕ ಬಿದಿದ್ದು ಅದನ್ನು ಸರಿಪಡಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ಸೇನೆ ಯುವ ಘಟಕದಿಂದ ಪ್ರತಿಭಟನೆ ಮಾಡಲಾಯಿತು. ಪ್ರಮುಖರಾದ ಹೊನ್ನೂರಸ್ವಾಮಿ, ಪಿ.ವೆಂಕಟೇಶ್, ಗುಜ್ಜಲ್ ಗಣೇಶ್, ಪಿ.ಶೇಕ್ಷಾವಲಿ, ಹನುಮಂತ, ರವಿಕುಮಾರ ಸೇರಿದಂತೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಬೇಡ್ಕರ್ ಸೇನ ಯುವ ಘಟಕದಿಂದ ರಸ್ತೆ ತಡೆದು ಆಗ್ರಹ
ಹೊಸಪೇಟೆ: ನಗರದ ಧೋಬಿ ಘಾಟ್ ಬಳಿಯ ರಸ್ತೆಯ ಸೇತುವೆಗೆ ಬಿದ್ದಿರುವ ದೊಡ್ಡ ಕಂದಕ ಮುಚ್ಚುವಂತೆ ಒತ್ತಾಯಿಸಿ ಅಂಬೇಡ್ಕರ್ ಸೇನೆ ಯುವ ಘಟಕದಿಂದ ಮಂಗಳವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ಮಾಡಲಾಯಿತು.
ಅಂಬೇಡ್ಕರ್ ಸೇನ ಯುವ ಘಟಕದ ಅಧ್ಯಕ್ಷ ಎಚ್.ಈರಣ್ಣ ಮಾತನಾಡಿ, ನಗರದ ಧೋಬಿ ಘಾಟ್ ಬಳಿಯ ರಸ್ತೆಯ ಸೇತುವೆಯು ಒಂದು ಪ್ರಮುಖ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಿದ್ದು ನಗರ ಮತ್ತು ಗ್ರಾಮೀಣ ಭಾಗದಿಂದ ಚಿಕಿತ್ಸೆಗಾಗಿ ಹೆಚ್ಚನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಾರೆ. ಸೇತುವೆಯ ಬಳಿ ಬಹು ದೊಡ್ಡ ಕಂದಕ ಬಿದ್ದಿದ್ದು ಕಂದಕದಿAದಾಗಿ ಹಲವು ಅಪಘಾತಗಳು ಆಗುತ್ತಿವೆ, ಹಲವು ಜನರು ಕೈ, ಕಾಲು ಮುರಿದುಕೊಂಡುದ್ದಾರುವ ಘಟನೆಗಳು ಸಂಭAವಿಸಿವೆ. ಆದ್ದರಿಂದ ಸಂಬAಧಿಸಿದ ಅಧಿಕಾರಿಗಳು ಆದಷ್ಟು ಬೇಗ ಕಂದಕವನ್ನು ಮುಚ್ಚುವಂತಾ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ವೇಳೆ ರಸ್ತೆ ಸಂಚಾರ ತಡೆದಿದ್ದರಿಂದ ವಾಹನಗಳ ದಟ್ಟಣೆ ಉಂಟಾಗಿ, ತೊಂದರೆ ಉಂಟಾಯಿತು. ಪೊಲೀಸ್ ಹಾಗೂ ಪ್ರತಿಭಟನಕಾರರ ಜತೆ ವಾಗ್ವಾದ ನಡೆಯಿತು. ನಂತರ ಸ್ಥಳಕ್ಕೆ ಆಗಮಿಸದ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಪೌರಾಯುಕ್ತ ಶಿವಕುಮಾರ್ ಯರಗುಡಿ ಮನವಿ ಸ್ವೀಕರಿಸಿ ಸಮಸ್ಯೆ ಸರಿಪಡಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ನಾವು ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ಕ್ರಮವಹಿಸುತ್ತವೆ ಎಂದು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net