ಕೆರೆ ಸ್ವಚ್ಛಗೊಳಿಸುವಂತೆ ಗ್ರಾಪಂ ಎದುರು ಪ್ರತಿಭಟನೆ

ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಕೆರೆ ಸ್ವಚ್ಛತೆಗೆ ಆಗ್ರಹಿಸಿ ಗ್ರಾಪಂ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಕೆರೆ ಸ್ವಚ್ಛತೆಗೆ ಆಗ್ರಹಿಸಿ ಗ್ರಾಪಂ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Published on
ಹೂವಿನಹಡಗಲಿ: ಹಿರೇಹಡಗಲಿ ಗ್ರಾಮದ ಕೆರೆ ಸ್ವಚ್ಛಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಗ್ರಾಪಂ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಕೆರೆ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ. ಆದರೂ, ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿಲ್ಲ. ಕೆರೆ ದಂಡೆಗೆ ಹಾಕಿರುವ ಕಬ್ಬಿಣದ ತಂತಿಬೇಲಿ ತೆಗೆದು ಕೆರೆಯಂಗಳದಲ್ಲಿ ಜನರು ಕಸ ಹಾಕುತ್ತಿದ್ದಾರೆ. ಇದರಿಂದ ಕೆರೆ ನೀರು ಮಲಿನವಾಗುತ್ತಿದೆ. ನೀರನ್ನು ಜಾನುವಾರುಗಳು ಕೂಡ ಕುಡಿಯುತ್ತಿಲ್ಲ ಎಂದು ದೂರಿದರು.
ಕೆರೆ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಕೆರೆಯನ್ನು ಸ್ವಚ್ಛಗೊಳಿಸುವುದಾಗಿ ಭರವಸೆ ನೀಡಿರುವುದು ಹುಸಿಯಾಗಿದೆ. ಕೂಡಲೇ ಕೆರೆ ಸ್ವಚ್ಛಗೊಳಿಸಲು ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಕೆಂಡೆಪ್ಪನವರ್ ರಮೇಶ, ಡಿ.ಚಂದ್ರಶೇಖರ, ಬಿ.ಶಬ್ಬೀರ್ ಬಾಷಾ, ಇದ್ಲಿ ಕೋಟೆಪ್ಪ, ಬಿದರಳ್ಳಿ ಚನ್ನವೀರಪ್ಪ, ಬಂದ್ರಕಳ್ಳಿ ಭರಮರಾಜ್, ಚಂದ್ರಶೇಖರ ದೊಡ್ಡಮನಿ, ಅಕ್ಕಿ ಮಂಜುನಾಥ, ಸಾಳೇರ ರಮೇಶ, ಪಿಂಜಾರ್ ಪೀರಸಾಬ್, ಸುಭಾನ್ ಹುಗಲೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net