ವೇಶ್ಯಾವಾಟಿಕೆ ಆರೋಪ ಮಹಿಳೆಯರ ರಕ್ಷಣೆ

ಹೊಸಪೇಟೆ ವೇಶ್ಯಾವಾಟಿಕೆ ಅಡ್ಡದ ಮೇಲೆ ಪೊಲೀಸರು ದಾಳಿ ನಡೆಸಿದರು. ಟಿ.ಬಿ. ಡ್ಯಾಂ ಪಿಐ ಮಹಮದ್ ಗೌಸ್, ಪಿಎಸ್‌ಐ ಶಿವಕುಮಾರ್ ನಾಯ್ಕ ಇತರರಿದ್ದರು.
ಹೊಸಪೇಟೆ ವೇಶ್ಯಾವಾಟಿಕೆ ಅಡ್ಡದ ಮೇಲೆ ಪೊಲೀಸರು ದಾಳಿ ನಡೆಸಿದರು. ಟಿ.ಬಿ. ಡ್ಯಾಂ ಪಿಐ ಮಹಮದ್ ಗೌಸ್, ಪಿಎಸ್‌ಐ ಶಿವಕುಮಾರ್ ನಾಯ್ಕ ಇತರರಿದ್ದರು.
Published on
ಹೊಸಪೇಟೆ: ನಗರದ ಲಾಡ್ಜ್ ಒಂದರ ಮೇಲೆ ಇಲ್ಲಿನ ಬಡಾವಣೆ ಠಾಣೆ ಪೊಲೀಸರು ಬುಧವಾರ ರಾತ್ರಿ ದಿಢೀರ್ ದಾಳಿ ನಡೆಸಿ, ವೇಶ್ಯಾವಾಟಿಕೆ ದಂಧೆಯಲ್ಲಿದ್ದ ಮೂವರು ಮಹಿಳೆಯರನ್ನು ರಕ್ಷಿಸಿ ಏಳು ಜನರ ವಿರುದ್ಧ ಪ್ರಕರ ದಾಖಲಾಗಿದೆ.
ಇಲ್ಲಿನ ಎಪಿಎಂಸಿ ಮಾರುಕಟ್ಟೆ ಬಳಿ ಇರುವ 'ಬಾಲಾಜಿ ಲಾಡ್ಜ್'ನಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಬಡಾವಣೆ ಠಾಣೆಯ ಪೊಲೀಸರು ಬುಧವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ ಸಿಲುಕಿದ್ದ ಮೂವರು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಲಾಗಿದ್ದು, ಈ ದಂಧೆಯ ಹಿಂದಿರುವ ಒಟ್ಟು 7 ಜನರ ವಿರುದ್ಧ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಎಎಸ್ಪಿ ಜಿ.ಮಂಜುನಾಥ್ ಮಾರ್ಗದರ್ಶನದಲ್ಲಿ ಟಿ.ಬಿ. ಡ್ಯಾಂ ಪಿಐ ಮಹಮದ್ ಗೌಸ್, ಪಿಎಸ್‌ಐ ಶಿವಕುಮಾರ್ ನಾಯ್ಕ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net