ಅಂಗ ಊನತೆಯಿಂದ ರಕ್ಷಣೆ

ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿಗೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಪಲ್ಸ್ ಪೋಲಿಯೋ ತಾಲೂಕು ನೋಡಲ್ ಅಧಿಕಾರಿ ಡಾ.ವಿನಯ್ ಮುದೇಗೌಡ್ರು ಲಸಿಕೆ ಹಾಕಿದರು.
ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿಗೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಪಲ್ಸ್ ಪೋಲಿಯೋ ತಾಲೂಕು ನೋಡಲ್ ಅಧಿಕಾರಿ ಡಾ.ವಿನಯ್ ಮುದೇಗೌಡ್ರು ಲಸಿಕೆ ಹಾಕಿದರು.
Published on
ಕೂಡ್ಲಿಗಿ: ಅಂಗವೈಕಲ್ಯ ಬಾರದಂತೆ ತಡೆಯಲು ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಿ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಪಲ್ಸ್ ಪೋಲಿಯೋ ತಾಲೂಕು ನೋಡಲ್ ಅಧಿಕಾರಿ ಡಾ.ವಿನಯ್ ಮುದೇಗೌಡ್ರು ಹೇಳಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಹಾಕಿಸಬೇಕು. ಇದರಿಂದ ಮಕ್ಕಳಿಗೆ ಯಾವುದೇ ಅಂಗ ಊನತೆ ಆಗುವುದಿಲ್ಲ. ಪೋಲಿಯೋಮೈಲಿಟಿಸ್ ವೈರಸ್‌ನಿಂದ ಉಂಟಾಗುವ ಕಾಯಿಲೆ ಹಾಗೂ ಅಂಗವೈಕಲ್ಯ ತಡೆಗಟ್ಟುವುದು ಅಭಿಯಾನದ ಉದ್ದೇಶವಾಗಿದೆ. ಈಗಾಗಲೇ ಲಸಿಕೆ ಹಾಕಿಸಿದ್ದರೂ ಮತ್ತೆ ಹಾಕಿಸಬೇಕು. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ಟಿಎಚ್‌ಒ ಡಾ.ಪ್ರದೀಪ್ ಮಾತನಾಡಿ, ಬೇರೆ ದೇಶಗಳ ಮಕ್ಕಳಲ್ಲಿ ಪೋಲಿಯೋ ಸಮಸ್ಯೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಪ್ರತಿ ವರ್ಷ ಪೋಲಿಯೋ ಲಸಿಕಾ ಅಭಿಯಾನ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಭಾರತದಲ್ಲಿ ಮಕ್ಕಳಿಗೆ ಪೋಲಿಯೋ ಸಮಸ್ಯೆ ಕಾಡದಿರಲಿ ಎಂದು ಮುಂಜಾಗ್ರತೆ ವಹಿಸಲಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಐದು ವರ್ಷದೊಳಗಿನ 21,035 ಮಕ್ಕಳು ಇವೆ. 195 ಬೂತ್‌ಗಳನ್ನು ನಿರ್ಮಿಸಿದ್ದು, ಜು.1 ರವರೆಗೆ ಮನೆ, ಮನೆಗೆ ಹೋಗಿ ಲಸಿಕೆ ಹಾಕಲು 122 ತಂಡಗಳನ್ನು ರಚಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ನವಜಾತ ಶಿಶುಗಳಿಗೆ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ ಎಂದರು.
ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಸಿ.ಮಧು, ಡಾ.ಸೋನಿ, ಡಾ.ಜಯಶೀಲ್ ನಾಯ್ಕ, ಧರ್ಮನ ಗೌಡ, ಸುಚಿತ್ರಾ, ಕಿರಣ್ ಕುಮಾರ್, ಜಗದೀಶ್ ನಾಯ್ಕ, ಕೆ.ಪ್ರಶಾಂತ್ ಕುಮಾರ್, ದೊಡ್ಡಪ್ಪ, ರಾಮಾಂಜನಿ, ಕೊಟ್ರಮ್ಮ, ಓಬಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net