ಮಾನವ ಹಕ್ಕುಗಳ ದಿನಾಚರಣೆ ಪ್ರತಿ ವರ್ಷ ಡಿ.10 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು 1948 ರಲ್ಲಿ ವಿಶ್ವಸಂಸ್ಥೆಯು ಅಂಗೀಕರಿಸಿದ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಸ್ಮರಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಘನತೆ, ಸಮಾನತೆ ಮತ್ತು ಸ್ವಾತಂತ್ರ‍್ಯ ಖಾತ್ರಿಪಡಿಸುವ ಈ ಹೆಗ್ಗುರುತು ದಾಖಲೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಯಾವುದೇ ಜಾತಿ ಜನಾಂಗ, ಬಣ್ಣ, ಧರ್ಮ, ಲಿಂಗ, ಭಾಷೆ, ರಾಜಕೀಯ, ಸ್ಥಾನಮಾನಗಳಿಗೆ ಬೆಲೆ ಕೊಡದೇ ಎಲ್ಲರೂ ಕೂಡ ಸರಿಸಮಾನರು. ಪ್ರತಿಯೊಬ್ಬರು ಬದುಕುವ ಹಕ್ಕಿನೊಂದಿಗೆ ಇತರೆ ಹಕ್ಕನ್ನು ಹೊಂದಿದ್ದಾರೆ. ಸಮಾಜದಲ್ಲಿ ಮಾನವನಿಗೆ ಯಾವುದೇ ಸ್ವತಂತ್ಯç ಹಾಗೂ ಹಕ್ಕುಗಳು ಇರದೇ ಹೋಗಿದ್ದರೆ ಮನುಷ್ಯ ಹೇಗೆ ಬೇಕೋ ಹಾಗೆ ಬದುಕುತ್ತಿದ್ದ. ಭವಿಷ್ಯದಲ್ಲಿ ಮಾನವನ ಅಸ್ತಿತ್ವವೇ ಇಲ್ಲವಾಗಿರುತ್ತಿತ್ತು. ಮಾನವ ಹಕ್ಕುಗಳು ನಾಗರಿಕ ಸಮಾಜದಲ್ಲಿ ಸ್ವಾತಂತ್ರ ಎತ್ತಿ ಹಿಡಿಯುತ್ತದೆ ಎಂದರು.