ಹೊಸಪೇಟೆಯಲ್ಲಿ ಮಂಗಳವಾರ ಮರಗಳ ರಕ್ಷಣೆಗಾಗಿ ಸಸ್ಯ ಶ್ಯಾಮಲಾ ಸಂರಕ್ಷಣಾ ಸೇವಾ ಸಂಘದಿAದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ವಿ.ನಾಗರಾಜ್, ಪ್ರಮುಖರಾದ ಶಿವಕುಮಾರ್, ಎ.ಗೋವಿಂದ, ಶಶಿಕುಮಾರ್, ರಮೇಶ್, ಸುಮಲತಾ ಇತರರಿದ್ದರು.
ಸಸ್ಯ ಶ್ಯಾಮಲಾ ಸಂರಕ್ಷಣಾ ಸೇವಾ ಸಂಘದಿAದ ಜಿಲ್ಲಾಧಿಕಾರಿಗೆ ಮನವಿ
ಹೊಸಫೇಟೆ: ವಿದ್ಯುತ್ ತಂತುಗಳಿಗೆ ಅಡ್ಡವಾಗಿ ಬೆಳೆದ ಮರಗಳನ್ನು ಕಡಿಯುವ ಬದಲು ಪರ್ಯಾಯ ವ್ಯವಸ್ಥೆ ಮಾಡಿ ಎಂದು ಸಸ್ಯ ಶ್ಯಾಮಲಾ ಸಂರಕ್ಷಣಾ ಸೇವಾ ಸಂಘದಿAದ ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ವಿ.ನಾಗರಾಜ್ ಮಾತನಾಡಿ, ರಸ್ತೆಯ ಪಕ್ಕದಲ್ಲಿ ಬೆಳೆದಿರುವ ಮರಗಳು ವಿದ್ಯುತ್ ವೈರ್‌ಗಳಿಗೆ ಅಡ್ಡಲಾಗಿ ಬೆಳೆಯುತ್ತವೆ ಎಂದು ಮರಗಳನ್ನು ಕಡೆದು ಹಾಕುವುದರಿಂದ ಪರಿಸರ ಹಾನಿ ಆಗುತ್ತದೆ. ಒಂದು ಸಸಿ ಮರವಾಗಿ ಬೆಳೆಯಲು ವರ್ಷಗಳೇ ಬೇಕಾಗುತ್ತದೆ. ರಣ ಬಿಸಿಲಿಗೆ ಹೈರಾಣಾಗಿ ಹೋಗುತ್ತಿದ್ದೇವೆ. ಜನಸಂಖ್ಯೆ ಹೆಚ್ಚಾಗುತ್ತಿದ್ದು ಸಂಚಾರಕ್ಕಾಗಿ ಎಲ್ಲರೂ ವಾಹಗಳಿಗೆ ಅವಲಂಬನೆ ಆಗಿದ್ದೇವೆ. ಇದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ನಾನಾ ಕಾರಣಗಳಿಂದ ಮರಗಳನ್ನು ಕಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆಗ್ರಹಿಸಿದರು.
ಮರಗಳು ಪ್ರಕೃತಿಯ ಅತ್ಯಮೂಲ್ಯ ಸಂಪತ್ತು. ಇವು ನಮಗೆ ಉಸಿರಾಡಲು ಶುದ್ಧ ಆಮ್ಲಜನಕವನ್ನು ನೀಡುವುದರ ಜತೆಗೆ, ಹಣ್ಣು, ನೆರಳು, ಮತ್ತು ಔಷಧಿಗಳನ್ನು ಒದಗಿಸುತ್ತವೆ. ಪರಿಸರದ ತಾಪಮಾನವನ್ನು ನಿಯಂತ್ರಿಸುತ್ತದೆ. ಕಾಲ ಕಾಲಕ್ಕೆ ಮಳೆ ಆಗುತ್ತದೆ. ಭೂಮಿಯನ್ನು ತಂಪಾಗಿರಿಸಿ ಪ್ರಾಣಿ-ಪಕ್ಷಿಗಳಿಗೆ ಆಶ್ರಯವಾಗುತ್ತದೆ. ಆದ್ದರಿಂದ ವಿದ್ಯುತ್ ತಂತಿಗಳಿಗೆ ಅಡ್ಡಲಾಗಿ ಬೆಳೆದ ರಸ್ತೆ ಬದಿಯ ಮರಗಳನ್ನು ಕಡಿಯುವ ಬದಲು ವಿದ್ಯುತ್ ತಂತಿಗಳ ರಕ್ಷಣೆಗೆ ಪರ್ಯಾವಾಗಿ ಕೇಬಲ್‌ಗಳನ್ನು ಅಳವಡಿಸುವುದಾಗಲಿ, ತಂತಿಗಳಿಗೆ ಪೈಪ್‌ಗಳನ್ನು ಅಳವಡಿಸಬೇಕು. ಅಥವಾ ಇನ್ಯಾವುದೇ ಇತರೆ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.