ಕೊಟ್ಟಿಗೆ ಗೊಬ್ಬರದಿಂದ ಮಣ್ಣು ಸಂರಕ್ಷಿಸಿ

ಹರಪನಹಳ್ಳಿ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಖೇತ್ ಬಚಾವೋ ಕಾರ್ಯಕ್ರಮವನ್ನು ಸಹಾಯಕ ಕೃಷಿ ನಿರ್ದೇಶಕ ಮಹಮ್ಮದ್ ಅಶ್ರಫ್ ಉದ್ಘಾಟಿಸಿದರು.
ಹರಪನಹಳ್ಳಿ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಖೇತ್ ಬಚಾವೋ ಕಾರ್ಯಕ್ರಮವನ್ನು ಸಹಾಯಕ ಕೃಷಿ ನಿರ್ದೇಶಕ ಮಹಮ್ಮದ್ ಅಶ್ರಫ್ ಉದ್ಘಾಟಿಸಿದರು.
Published on
ಹರಪನಹಳ್ಳಿ: ಕೃಷಿ ಭೂಮಿಯನ್ನು ಸಂರಕ್ಷಿಸುವ ಜತೆಗೆ ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಮಹಮ್ಮದ್ ಅಶ್ರಫ್ ಸಲಹೆ ನೀಡಿದರು.
ಹೊಸಕೋಟೆ ಗ್ರಾಮದಲ್ಲಿ ಬುಧವಾರ ಖೇತ್ ಬಚಾವೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಾವಯವ ಗೊಬ್ಬರ ಬಳಕೆ ಬಹುಮುಖ್ಯ. ಕನಿಷ್ಠ ಮೂರು ವರ್ಷಕ್ಕೊಮ್ಮೆ ಹೊಲದ ಮಣ್ಣಿಗೆ ಸರಿಹೊಂದುವ ಕೆರೆಯ ಗೋಡು ಮಣ್ಣು ಹಾಕಬೇಕು. ಕೊಟ್ಟಿಗೆ ಗೊಬ್ಬರ ಬಳಸಿ ಮಣ್ಣಿನ ಸಂರಕ್ಷಣೆ ಮಾಡಬೇಕು ಎಂದರು. ಕೃಷಿ ಅಧಿಕಾರಿ ಷಣ್ಮುಖನಾಯ್ಕ ಮಾತನಾಡಿ, ಮಣ್ಣಿನ ಆರೋಗ್ಯ ವೃದ್ಧಿಗೆ ವಿಜ್ಞಾನಿಗಳ ಶಿಫಾರಸಿನಂತೆ ಮಿತವಾಗಿ ರಸಗೊಬ್ಬರ ಬಳಸಬೇಕು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net