ಸ್ಥಳೀಯ ವ್ಯಾಪಾರಿಗಳ ಹಿತ ಕಾಪಾಡಿ

ಇ-ಫಾರ್ಮಸಿ ವಹಿವಾಟು ವಿರೋಧಿಸಿ ಕೂಡ್ಲಿಗಿಯಲ್ಲಿ  ಶಿರಸ್ತೇದಾರ್ ಎಸ್.ಚಂದ್ರಶೇಖರಗೆ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದರು.
ಇ-ಫಾರ್ಮಸಿ ವಹಿವಾಟು ವಿರೋಧಿಸಿ ಕೂಡ್ಲಿಗಿಯಲ್ಲಿ ಶಿರಸ್ತೇದಾರ್ ಎಸ್.ಚಂದ್ರಶೇಖರಗೆ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದರು.
Published on
ಕೂಡ್ಲಿಗಿ: ಆನ್‌ಲೈನ್‌ನಲ್ಲಿ ಚೀಟಿ ನೀಡದೆ ಔಷಧ ತರಿಸಿಕೊಳ್ಳಲು ಅನುವು ಮಾಡಿಕೊಡುವ ಇ-ಫಾರ್ಮಸಿ ವಹಿವಾಟುಗಳನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಬುಧವಾರ ಔಷಧ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸುವ ಮೂಲಕ ಆಗ್ರಹಿಸಿದರು.
ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಕರೆ ಮೇರೆಗೆ ಪಟ್ಟಣದಲ್ಲಿ ಎಲ್ಲ ಔಷಧ ಅಂಗಡಿಗಳನ್ನು ಮುಚ್ಚಿದ್ದ ವ್ಯಾಪಾರಿಗಳು ಶಿರಸ್ತೆದಾರ್ ಎಸ್.ಚಂದ್ರಶೇಖರಗೆ ಮನವಿ ಸಲ್ಲಿಸಿದರು. ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಹಿ.ಮ.ಚಿದಾನಂದಸ್ವಾಮಿ ಮಾತನಾಡಿ, ಇ-ಫಾರ್ಮಸಿ ವ್ಯವಸ್ಥೆಯಿಂದಾಗಿ ಲಕ್ಷಾಂತರ ಔಷಧ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಅವರ ಹಿತವನ್ನು ಕಾಪಾಡುವುದರೊಂದಿಗೆ ಕುಟುಂಬಗಳನ್ನೂ ರಕ್ಷಿಸಬೇಕೆಂದು ಒತ್ತಾಯಿಸಿದರು.
ತಾಲೂಕು ಕಾರ್ಯದರ್ಶಿ ರಾಘವೇಂದ್ರ ಶ್ರೇಷ್ಠಿ, ಗುಳಿಗಿ ವೀರಭದ್ರಪ್ಪ, ಜಿ.ಅರ್.ಸಿದ್ದೇಶ, ಪಿ.ಪ್ರಶಾಂತ, ಆಶೋಕ, ವೈ.ಎಂ. ಮಂಜುನಾಥ, ಎ.ಎಂ.ಛಲಪತಿ, ಕುಮಾರ್, ಎಚ್.ಪ್ರಕಾಶ, ಡಾ.ಹೇಮಂತ, ಡಾ.ಬಿ.ಕೊಟ್ರೇಶ್, ನರಸಿಂಹಮೂರ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net