ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಅಬಕಾರಿ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ವರ್ಗಾವಣೆ, ತಿಂಗಳ ಮನಿ, ಹಫ್ತಾ ವಸೂಲಿ ದಂಧೆ, ಲೈಸನ್ಸ ನವೀಕರಣಕ್ಕಾಗಿ ಕಿಕ್‌ಬ್ಯಾಕ್, ಹೊಸ ಲೈಸೆನ್ಸ್ ಮಂಜೂರಾತಿಗೆ ಲಂಚಗುಳಿತನ ಇಲಾಖಾ ಕೆಲ ಸಿಬ್ಬಂದಿ ಮತ್ತು ಮಧ್ಯವರ್ತಿಗಳಿಂದ ನಿರಂತರವಾಗಿ ಲಂಚಾವತಾರ ಸದ್ದು ಮಾಡುತ್ತಿದೆ. ಹಫ್ತಾ ವಸೂಲಿ ಮಾತುಕತೆಯ ಆಡಿಯೋ ಪ್ರಕರಣದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಮತ್ತು ಅವರ ಪುತ್ರ ವಿನಯ ತಿಮ್ಮಾಪೂರ ಹೆಸರು ಪದೇಪದೇ ಕೇಳಿಬರುತ್ತಿದೆ ಎಂದು ಆರೋಪಿಸಿದರು.