ಪುರಾತನ ಕೆರೆಗಳ ರಕ್ಷಣೆ ಮಾಡಿ

ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪುರಾತರನ ಕೆರೆಗಳ ರಕ್ಷಣೆ ಮಾಡುವಂತೆ ಒತ್ತಾಯಿಸಿ ಸಿಪಿಐಎಂಎಲ್ ಸಂಘಟನೆಯಿAದ ಪ್ರತಿಭಟನೆ ನಡೆಯಿತು. ಜಿಲ್ಲಾ ಕಾರ್ಯದರ್ಶಿ ಸಂದೇರ್ ಪರಶುರಾಮ್, ಪ್ರಮುಖರಾದ ಸಂತೋಷ್ ಗುಳೆದಟ್ಟಿ, ಕುರುವತ್ತಿ ಬಸಪ್ಪ ಇತರರಿದ್ದರು.
ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪುರಾತರನ ಕೆರೆಗಳ ರಕ್ಷಣೆ ಮಾಡುವಂತೆ ಒತ್ತಾಯಿಸಿ ಸಿಪಿಐಎಂಎಲ್ ಸಂಘಟನೆಯಿAದ ಪ್ರತಿಭಟನೆ ನಡೆಯಿತು. ಜಿಲ್ಲಾ ಕಾರ್ಯದರ್ಶಿ ಸಂದೇರ್ ಪರಶುರಾಮ್, ಪ್ರಮುಖರಾದ ಸಂತೋಷ್ ಗುಳೆದಟ್ಟಿ, ಕುರುವತ್ತಿ ಬಸಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿಪಿಐಎಂಎಲ್ ಸಂಘಟನೆಯಿAದ ಪ್ರತಿಭಟನೆ
ಹೊಸಪೇಟೆ: ಪುರಾತನ ಕೆರೆಗಳ ರಕ್ಷಣೆ ಮಾಡುವಂತೆ ಒತ್ತಾಯಿಸಿ ಸಿಪಿಐಎಂಎಲ್ ಸಂಘಟನೆಯಿAದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಹೂವಿನಹಡಗಲಿ ತಾಲೂಕಿನ ಹಾರಡ ಗ್ರಾಮದ ಪುರಾತನ ಕೆರೆಗಳಿದ್ದು, ಹಿರೇ ಮಲಿಯಮ್ಮನ ಕೆರೆ, ಸಂಗಪ್ಪನಕೆರೆ ಕಲ್ಲಪ್ಪನ ಕುಂಟೆ ಕೆರೆ ಜಾಗವನ್ನು ಪಹಣಿಯಲ್ಲಿ ಸೇರ್ಪಡೆ ಮಾಡಬೇಕು. ಹರಪನಹಳ್ಳಿ ತಾಲೂಕಿನ ಹಲವು ಹಗರಣ ಹಾಗೂ ಅಧಿಕಾರಿಗಳ ನಿರ್ಲಕ್ಷಗಳ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ, ಕ್ರಮ ವಹಿಸಿಲ್ಲ. ಹಡಗಲಿ ತಾಲೂಕಿನ ಸರ್ವೆಯರ್ ಎಡಿಎಲ್‌ಆರ್ ಹಾಗೂ ಡಿಡಿಎಲ್‌ಆರ್ ಅಧಿಕಾರಿಗಳು ಕೆರೆಗಳ ನಕಾಶೆಯನ್ನು ವಿಸ್ತೀರ್ಣದಂತೆ ತಯಾರಿಸದೆ, ಒತ್ತುವರಿ ಮಾಡಿದವರ ಪರವಾಗಿ ನಕಾಶೆ ತಯಾರಿಸಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದ್ದು, ಸಂಬAಧಿಸಿದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ ಕೆಲಸದಿಂದ ವಜಾ ಗೊಳಿಸಬೇಕು ಎಂದು ಒತ್ತಾಯಿಸಿದರು.
ಹೂವಿನಹಡಗಲಿ ಕೊಟ್ಟೂರು ತಾಲೂಕಿನ ಮದ್ಯೆ ಕಾರ್ಮಿಕರಿಗಾಗಿ ಇಎಸ್‌ಐ ಆಸ್ಪತ್ರೆ ತೆರೆಯಬೇಕು. ಬ್ಯಾಂಕ್, ಸೊಸೈಟಿ ಹಾಗೂ ಫೈನಾನ್ಸ್ಗಳಲ್ಲಿ ಮತ್ತು ಧರ್ಮಸ್ಥಳ ಸಂಘಗಳಲ್ಲಿ ಕೊಟ್ಟಿರುವ ಸಾಲಗಳನ್ನು ಮನ್ನಾಮಾಡಬೇಕು. ವಿದ್ಯಾರ್ಥಿಗಳಿಗೆ ಎಸ್‌ಎಸ್‌ಪಿ ಸ್ಕಾಲರ್‌ಸೀಫ್ ನೀಡಬೇಕು. ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಇತರೆ ಬೇಡಿಕೆಗಳಿಗೆ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ಬೇಡಿಕೆ ಈಡೇರದ್ದರೆ ಹೋರಾಟ ತ್ರೀವ್ರಗೋಳಿಸಲಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯದರ್ಶಿ ಸಂದೇರ್ ಪರಶುರಾಮ್, ಪ್ರಮುಖರಾದ ಸಂತೋಷ್ ಗುಳೆದಟ್ಟಿ, ಕುರುವತ್ತಿ ಬಸಪ್ಪ, ಮೈಲಾಪ್ಪ, ಪ್ರಕಾಶ, ರೇಣುಕಮ್ಮ, ಗೋಣೆಪ್ಪ, ಗೌರಮ್ಮ, ಫಕೀರಪ್ಪ, ರಾಮಣ್ಣ, ಕೆ ರಾಘವೇಂದ್ರ, ಅಂಜಿನಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net