ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ

ಪಿ.ವೆಂಕಟೇಶ್
ಪಿ.ವೆಂಕಟೇಶ್
Published on
ಹೊಸಪೇಟೆ: ಜಾಗತೀಕರಣದ ಈ ಯುಗದಲ್ಲಿ ಯುವಜನತೆ ದಾರಿ ತಪ್ಪುತ್ತಿದ್ದು, ಅವರಲ್ಲಿ ಗ್ರಾಮೀಣ ಕ್ರೀಡಾ ಮನೋಭಾವವನ್ನು ಬೆಳೆಸಲು ಮತ್ತು ಜಾಗೃತಿ ಮೂಡಿಸಲು ಆಗಸ್ಟ್ 15ರಂದು ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ಕರುನಾಡ ಕಲಿಗಳ ಕ್ರೀಯಾಶೀಲ ಜಿಲ್ಲಾ ಸಮಿತಿ ಪಿ.ವೆಂಕಟೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಸೈಕಲ್ ಸ್ಪರ್ಧೆಯನ್ನು ಆ.15ರಂದು ಬೆಳಿಗ್ಗೆ 6 ಗಂಟೆಗೆ ಕೂಡ್ಲಿಗಿಯ ಬಣವಿಕಲ್ಲಿನಲ್ಲಿ ಚಾಲನೆ ದೊರೆಯಲಿದ್ದು, ವಾಲ್ಮೀಕಿ ವೃತ್ತದವರೆಗೆ ನಡೆಯಲಿದೆ. 70 ಕಿ.ಮೀ. ದೂರದ ಈ ಸ್ಪರ್ಧೆ 1.5 ಗಂಟೆಯಲ್ಲಿ ಮುಕ್ತಾಯಗೊಳ್ಳಲಿದ್ದು, 10ರಿಂದ 15 ಜನ ಭಾಗವಹಿಸಲಿದ್ದಾರೆ. ಓಟದ ಸ್ಪರ್ಧೆಯನ್ನು ಸಂಡೂರು ತಾಲೂಕಿನ ಜೆಸಿಂಗ್‌ಪುರದಲ್ಲಿ ನಡೆಯಲಿದ್ದು, 50 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಗುಡ್ಡ ಹತ್ತುವ ಸ್ಪರ್ಧೆಯನ್ನು ವಿವೇಕಾನಂದ ಪಾರ್ಕ್ನಿಂದ ಆರಂಭವಾಗುವ ಜೋಳದರಾಶಿ ಗುಡ್ಡ ಹತ್ತುವ ಸ್ಪರ್ಧೆಯಲ್ಲಿ 40 ಜನ ಪಾಲ್ಗೊಳ್ಳಲಿದ್ದಾರೆ. ಎಸ್ಪಿ ಎಸ್.ಜಾಹ್ನವಿ ಚಾಲನೆ ನೀಡಲಿದ್ದು, ಕಾಂಗ್ರೆಸ್ ನಾಯಕಿ ರಾಣಿ ಸಂಯುಕ್ತ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.
ಪ್ರಮುಖರಾದ ಗುಜ್ಜಲ ಗಣೇಶ್, ದಾದಾಖಲಂದರ್, ಅಬ್ದುಲ್ ರಜಾಕ್, ಬೆಳಗೋಡು ಮಂಜುನಾಥ, ತಳವಾರಂಮಜುನಾಥ, ಈರಣ್ಣ, ನಬಿಸಾಬ್, ರಾಮು, ಮಂಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net