ಪ್ರೇರಣೆ ನೀಡಲಿವೆ ತತ್ವಗಳು

ಹಗರಿಬೊಮ್ಮನಹಳ್ಳಿ ಪುರಸಭೆ ಕಚೇರಿಯಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.
ಹಗರಿಬೊಮ್ಮನಹಳ್ಳಿ ಪುರಸಭೆ ಕಚೇರಿಯಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.
Published on
ಹಗರಿಬೊಮ್ಮನಹಳ್ಳಿ: ಪಟ್ಟಣದ ಪುರಸಭೆಯಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.
ಪುರಸಭೆ ನಿಕಟಪೂರ್ವ ಅಧ್ಯಕ್ಷ ಮರಿರಾಮಪ್ಪ ಮಾತನಾಡಿ, ಸಮಾಜದಲ್ಲಿ ಮೇಲು-ಕೀಳುಗಳೆಂಬ ಭೇದ ತೊರೆಯಬೇಕು. ಸಮಾಜದ ನಿಂದನೆಯನ್ನು ಯಾವ ರೀತಿ ಎದುರಿಸಿ ಜೀವನ ನಡೆಸಬೇಕು. ಸಮಾಜಕ್ಕೆ ಹೇಗೆ ಆದರ್ಶರಾಗಬೇಕೆಂಬುದನ್ನು ಸಾರಿದವರಲ್ಲಿ ಹೇಮರಡ್ಡಿ ಮಲ್ಲಮ್ಮ ಪ್ರಮುಖರಾಗಿದ್ದಾರೆ. ಮಹನೀಯರ ಆದರ್ಶ-ತತ್ವಗಳು ಜೀವನಕ್ಕೆ ಪ್ರೇರಣೆ ನೀಡಲಿದ್ದು, ಅವರ ಚಿಂತನೆಗಳು ನಮಗೆ ದಾರಿದೀಪ ಎಂದರು.
ರೆಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ರೆಡ್ಡಿ, ಪ್ರಮುಖರಾದ ಆನಂದ ರೆಡ್ಡಿ, ಬಸರೆಡ್ಡಿ, ಕೋರಿ ಗೋಣಿಬಸಪ್ಪ, ಸಿಕಂದರ್, ಸೆರೆಗಾರ ಹುಚ್ಚಪ್ಪ, ಬಾಳಪ್ಪ, ಗುಂಡ್ರು ಹನುಮಂತಪ್ಪ, ಮುಖ್ಯಶಿಕ್ಷಕ ಕೃಷ್ಣನಾಯ್ಕ, ಎಚ್.ಎಂ.ವಿಜಯಕುಮಾರ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net