ಉಜ್ಜಿನಿ: ಮಳೆಯಿಲ್ಲದೆ ರೈತರು ಬಿತ್ತನೆಗೆ ಪರದಾಡುವಂತಾಗಿದೆ. ಎರೆ ಜಮೀನು ಹೊಂದಿರುವ ರೈತರು ಸೂರ್ಯಕಾಂತಿ ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು ಮಳೆಗಾಗಿ ಕಾಯುತ್ತಿದ್ದಾರೆ.
ಕೆಲ ರೈತರು ರಾಗಿ ಮತ್ತು ಸಜ್ಜೆ ಬಿತ್ತುತ್ತಿದ್ದಾರೆ. ಬಿತ್ತನೆಗಾಗಿ ರೈತ ಸಂಪರ್ಕ ಕೇಂದ್ರದಿಂದ ರಾಗಿ ಬೀಜ ಕೊಂಡೊಯ್ಯುತ್ತಿದ್ದಾರೆ. ಜಾನುವಾರುಗಳು ಮೇವಿಗಾಗಿ ಪರದಾಡುವಂತಾಗಿದೆ. ಕುರಿಗಾಹಿಗಳು ಕುರಿಗಳಿಗೆ ಮೇವು ಹುಡುಕಿಕೊಂಡು ಅಲೆದಾಡುತ್ತಿದ್ದಾರೆ.