ಸೋನಿಯಾ ಗಾಂಧಿ ಆರೋಗ್ಯ ಚೇತರಿಕೆಗೆ ಪೂಜೆ

ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಮುಂದೆ ಸೋಮವಾರ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋನಿಯಾ ಗಾಂಧಿ ಭಾವ ಚಿತ್ರ ಹಿಡಿದು ಪ್ರಾರ್ಥಿಸಿದರು. ಯುವ ಕಾಂಗ್ರೆಸ್ ಸಂಚಾಲಕ ಸಿ.ಆರ್.ಭರತ್ ಕುಮಾರ್, ಗಣೇಶ ಪಾಟೀಲ್, ಅಲ್ತಾಫ್, ಪ್ರಮುಖರಾದ ಪ್ರಶಾಂತ್, ಮೊಹಮ್ಮದ್ ಗೌಸ್, ಚಿರಂಜೀವಿ ಇತರರಿದ್ದರು.  =====

Published on

ಹೊಸಪೇಟೆ: ಕಾಂಗ್ರೆಸ್ ಸಮಿತಿ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯ ಶೀಘ್ರ ಚೇತರಿಕೆ ಕಾಣಲಿ ಎಂದು ಪ್ರಾರ್ಥಿಸಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇಗುಲದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ನಿಧನದ ನಂತರ ಸೋನಿಯಾ ಗಾಂಧಿ ಅವರು ದೇಶದಲ್ಲಿ ಕಾಂಗ್ರೆಸ್ ನೇತೃತ್ವವಹಿಸಿ ಪಕ್ಷ ಸಂಘಟನೆ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮನಮೋಹನ್ ಸಿಂಗ್ ಅವರು 10 ವರ್ಷ ಪ್ರಧಾನಿಯಾಗಿ ಯಶಸ್ವಿಯಾಗಿ ಸರ್ಕಾರ ನಡೆಸಿದರು. ಅಂತಹ ನಾಯಕಿ ಸೋನಿಯಾ ಅವರು ಬೇಗನೆ ಗುಣಮುಖರಾಗಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ದೇವರಲ್ಲಿ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net