ಹೊಸಪೇಟೆಯಲ್ಲಿ ಬುಧವಾರ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಅಶೋಕ್ ನಾಯ್ಕ, ಭರತ್ ಕುಮಾರ್, ಗಣೇಶ್, ಕುಮಾರ್, ಭೀಮರಾಜ್ ಇತರÀರಿದ್ದರು.
ಹೊಸಪೇಟೆ: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ವಿರುದ್ಧ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಅಮೆರಿಕಾ-ಇಸ್ರೇಲ್, ಇರಾನ್ ಮಧ್ಯೆ ನಡೆಯುತ್ತಿರೋ ಯುದ್ಧದಿಂದಾಗಿ ತೈಲ ಖರೀದಿ ಮಾಡಬೇಕು ಅಂದರೆ ಅಮೆರಿಕಾ ಹೇಳಿದಂತೆ ಪ್ರಧಾನಿ ನರೇಂದ್ರ ಮೋದಿ ಕೇಳುತ್ತಿದ್ದಾರೆ. ವಿದೇಶದಿಂದ ಖರೀದಿ ಮಾಡಿದ ತೈಲವನ್ನ ಅದಾನಿ, ಅಂಬಾನಿ ಕಂಪನಿಗಳಿಗೆ ತುಂಬಿಸಿಕೊಳ್ಳಲು ಹೇಳುತ್ತಿದೆ. ಬೇರೆ ದೇಶದ ಅಧ್ಯಕ್ಷ ಹೇಳಿದಂತೆ ಭಾರತ ದೇಶದ ಪ್ರಧಾನಿ ಮೋದಿ ಕೇಳುತ್ತಿದ್ದಾರೆ. ಕೂಡಲೇ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.
ನರೇಂದ್ರ ಮೋದಿಅವರ ಹೆಸರು ಎಫಸ್ಟಿನ್ ಫೈಲ್ಸ್ ಪ್ರಕರಣದಲ್ಲಿ ತಳಕು ಹಾಕಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅದನ್ನೇ ಇಟ್ಟುಕೊಂಡು ಅವರು ಹೇಳಿದವರ ಕಡೆಯಿಂದ ತೈಲ ಖರೀದಿ ಮಾಡಬೇಕು ಎಂದು ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ. ಬೇರೆ ದೇಶದ ಅಧ್ಯಕ್ಷರು ಹೇಳಿದ್ದನ್ನ ಪ್ರಧಾನಿ ನರೇಂದ್ರ ಮೋದಿ ಯಾಕೆ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.