ಮೊಟ್ಟೆ ದರ ಪರಿಷ್ಕರಣೆ ಮಾಡಿ

ಹರಪನಹಳ್ಳಿಯಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಹರಪನಹಳ್ಳಿಯಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
Published on
ಹರಪನಹಳ್ಳಿ: ಶಾಲಾ ಮಕ್ಕಳಿಗೆ ವಿತರಿಸುವ ಮೊಟ್ಟೆಯ ದರವನ್ನು ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ನಿತ್ಯ ವಿತರಿಸುವ ಮೊಟ್ಟೆಯ ದರಕ್ಕೆ ಸರ್ಕಾರ ನೀಡುತ್ತಿರುವ 6 ರೂ. ಸಾಲುತ್ತಿಲ್ಲ. ಈ ಪೈಕಿ 5.50 ರೂ. ಮುಖ್ಯಶಿಕ್ಷಕರಿಗೆ ತಲುಪುತ್ತದೆ. 30 ಪೈಸೆ ಮೊಟ್ಟೆ ಸುಲಿಯಲು, 20 ಪೈಸೆ ಗ್ಯಾಸ್ ಸಿಲಿಂಡರ್‌ಗೆ ನೀಡಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ತಲಾ 9 ರೂ. ಇದ್ದು, ಮುಖ್ಯಶಿಕ್ಷಕರು ಸ್ವಂತ ಖರ್ಚಿನಿಂದ ಮೊಟ್ಟೆ ಖರೀದಿಸಬೇಕಾದ ಅನಿವಾರ್ಯತೆಯಿದೆ. ಖರ್ಚಿನ ಭಾರದೊಂದಿಗೆ ದಾಖಲೆಗಳನ್ನು ನೋಡಿಕೊಳ್ಳುವುದು ಹಾಗೂ ಇತರ ಕೆಲಸದ ಜವಾಬ್ದಾರಿ ಹೆಚ್ಚಾಗಿದ್ದು, ಹೊರೆ ಕಡಿಮೆಗೊಳಿಸಿ ಮಕ್ಕಳಿಗೆ ಪಾಠ ಬೋಧನೆ ಮಾಡಲು ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಿದರು.
ಪ್ರಮುಖರಾದ ಅರುಣಾ ಕುಮಾರಿ, ಶ್ರೀಕಾಂತ್ ಕೆ. ಎಂ., ಕೊಟ್ರೇಶಪ್ಪ ಜಿ., ಶಿಲ್ಪಾ ಅಡವಿಹಳ್ಳಿ, ರತ್ನಿಬಾಯಿ ಎಚ್., ಜಿ.ಕರಿಬಸಪ್ಪ, ಜಗದೀಶ್ ಡಿ., ಶೀಲಾ ಎಂ.ಟಿ., ಶೋಭಾಕುಮಾರಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net