ಪ್ರವಾಸಿಗರ ಸುರಕ್ಷತೆ, ಭದ್ರತೆ ಮತ್ತು ಗುಣಮಟ್ಟದ ಸೇವೆ ಖಚಿತಪಡಿಸಲು ಸರ್ಕಾರದಿಂದ ಹೊಸ ಮಾರ್ಗಸೂಚಿಗಳು ರೂಪಿಸಲಾಗಿದೆ. ಕೊಪ್ಪಳ ಮತ್ತು ಕೊಡಗು ಜಿಲ್ಲೆಗಳಲ್ಲಿ ನಡೆದ ಅಪರಾಧ ಪ್ರಕರಣಗಳ ಹಿನ್ನೆಲೆ ಖಾಸಗಿ ವಸತಿ ವ್ಯವಸ್ಥೆಗಳ ಮೇಲಿನ ನಿಯಂತ್ರಣವನ್ನು ಬಲಪಡಿಸಿದೆ. ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಪ್ರಮಾಣಪತ್ರ ಮತ್ತು ಪರವಾನಗಿಗಳನ್ನು ಹೋಂಸ್ಟೇಗಳ ಮುಖ್ಯ ಪ್ರವೇಶದ್ವಾರದಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಸಾರ್ವಜನಿಕರಿಗೆ ಲಭ್ಯವಾಗುವಂತೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರತಿಯೊಂದು ವಸತಿ ಘಟಕದಲ್ಲೂ 112 ತುರ್ತು ಸಹಾಯವಾಣಿ, 1363 ಪ್ರವಾಸಿಗರ ಸಹಾಯವಾಣಿ, 181 ಮಹಿಳಾ ಸುರಕ್ಷತೆ ಹಾಗೂ 1098 ಮಕ್ಕಳ ಸಹಾಯವಾಣಿ, ಸಮೀಪದ ಆಸ್ಪತ್ರೆ, ಜಿಲ್ಲಾಕಾರಿ ಕಚೇರಿ, ವಿಪತ್ತು ನಿರ್ವಹಣಾ ಪ್ರಾಕಾರ, ಸೇರಿದಂತೆ ಪ್ರಮುಖ ಸಂಖ್ಯೆಗಳ ಪ್ರದರ್ಶನ ಕಡ್ಡಾಯಗೊಳಿಸಲಾಗಿದೆ. ಹೋಂಸ್ಟೇಗಳಲ್ಲಿ ಸಿಸಿಟಿವಿ ಕಡ್ಡಾಯ, ಅತಿಥಿಗಳ ದಾಖಲಾತಿ ನಿರ್ವಹಣೆ, ವಿದೇಶಿ ಪ್ರವಾಸಿಗರ ವಿವರಗಳನ್ನು ಪೊಲೀಸರಿಗೆ ಮಾಹಿತಿ ನೀಡಬೇಕು.