ಕ್ಷಣಗಳನ್ನು ಜೀವಂತವಾಗಿಡುವ ಅದ್ಭುತ ಕಲೆ ಛಾಯಾಗ್ರಹಣ

ಹೊಸಪೇಟೆ ಪಂಪಾ ಕಲಾಮಂದಿರದಲ್ಲಿ ಬುಧವಾರ ನಡೆದ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಸಂಘದ 15ನೇ ವರ್ಷದ ಸಂಭ್ರಮಾಚರಣೆಯನ್ನು ಡಿವೈಎಸ್ಪಿ ಪಿ. ಮುರಳಿಧರ್ ಉದ್ಘಾಟಿಸಿದರು. ಚಿಂತಾಮಣಿ ಮಠದ ಪೀಠಾಧಿಕಾರಿ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮೀಜಿ, ಪ್ರಮುಖರಾದ ಗುಜ್ಜಲ್ ರಾಮು, ಗಣೇಶ್ , ರಾಘವೇಂದ್ರ, ಮಲ್ಲಿಕಾರ್ಜುನ, ಮಾರುತಿ, ರಾಂಬಾಬು ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಿವಾನಂದ ಭಾರತೀ ಸ್ವಾಮೀಜಿ ಅಭಿಪ್ರಾಯ
ಹೊಸಪೇಟೆ: ಕಾಲದ ಓಟದಲ್ಲಿ ಮರೆಯಾಗುವ ಕ್ಷಣಗಳನ್ನು ಚೌಕಟ್ಟಿನಲ್ಲಿ ಸೆರೆಹಿಡಿದು, ಜೀವನಪರ್ಯಂತ ನೆನಪಿನಲ್ಲಿ ಉಳಿಯುವಂತೆ ಮಾಡುವ ಛಾಯಾಗ್ರಹಣ ಕೇವಲ ವೃತ್ತಿಯಲ್ಲ, ಅದೊಂದು ದೈವಿಕ ಕಲೆ ಎಂದು ಇಲ್ಲಿನ ಚಿಂತಾಮಣಿ ಮಠದ ಪೀಠಾಧಿಕಾರಿ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮೀಜಿ ತಿಳಿಸಿದರು.
​ತುಂಗಭದ್ರಾ ಫೋಟೋಗ್ರಾಫರ್ಸ್ ಅಂಡ್ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್' ವತಿಯಿಂದ ನಗರದ ಪಂಪಾ ಕಲಾಮಂದಿರದಲ್ಲಿ ಬುಧವಾರ ನಡೆದ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಸಂಘದ 15ನೇ ವರ್ಷದ ಸಂಭ್ರಮಾಚರಣೆಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಪ್ರತಿಯೊಬ್ಬರ ಜೀವನದ ಸಂತಸದ ಕ್ಷಣಗಳನ್ನು ದಾಖಲಿಸಿ ಕಣ್ಣಿಗೆ ಕಟ್ಟುವಂತೆ ಮಾಡುವ ಮಹತ್ತರ ಕಾಯಕವನ್ನು ಛಾಯಾಗ್ರಾಹಕರು ನಿಷ್ಠೆಯಿಂದ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
​ಡಿವೈಎಸ್ಪಿ ಪಿ. ಮುರಳಿಧರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 80ರ ದಶಕದಲ್ಲೇ ಅತ್ಯಂತ ಸಣ್ಣ ಮಟ್ಟದಲ್ಲಿ ಆರಂಭವಾದ ಈ ಒಕ್ಕೂಟ, ಈಗ 15 ವರ್ಷಗಳ ಯಶಸ್ವಿ ಪ್ರಯಾಣವನ್ನು ಪೂರೈಸಿ ಹೆಮ್ಮರವಾಗಿ ಬೆಳೆದು ನಿಂತಿದೆ‌. ಆಧುನಿಕ ಯುಗದಲ್ಲಿ ತಂತ್ರಜ್ಞಾನ, ಕ್ಯಾಮೆರಾ ಹಾಗೂ ಎಡಿಟಿಂಗ್ ಶೈಲಿಗಳು ಬದಲಾಗುತ್ತಿದ್ದರೂ, ನಮ್ಮ ಭಾಗದ ಛಾಯಾಗ್ರಾಹಕರು ಹೊಸ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಸೃಜನಶೀಲತೆಯಿಂದ ಕೆಲಸ ಮಾಡುತ್ತಿದ್ದಾರೆ. ಈ ಸಂಘ ಕೇವಲ ವೃತ್ತಿಪರ ವೇದಿಕೆಯಾಗದೆ ಸದಸ್ಯರ ಕಷ್ಟ-ಸುಖಗಳಿಗೆ ಸದಾ ಬೆನ್ನೆಲುಬಾಗಿ ನಿಂತಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net