ಹೊಸಪೇಟೆ. ತಾಲೂಕಿನ ಗಾದಿಗನೂರು ಬಳಿ ರಾಷ್ಟಿಯ ಹೆದ್ದಾರಿ 67ರಲ್ಲಿ ಶುಕ್ರವಾರ ಸಂಜೆ ಪೆಟ್ರೋಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ನಗರದ ಕಡೆಯಿಂದ ಬಳ್ಳಾರಿ ಕಡೆ ಹೊರಟಿದ್ದ ಪೆಟ್ರೋಲ್ ತುಂಬಿದ ಟ್ಯಾಂಕರ್ ಗೆ ಹಿಂಬಡಿಯಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ರಸ್ತೆ ಮಧ್ಯದಲ್ಲಿಯೇ ಉರುಳಿ ಬಿದ್ದಿದೆ. ಪರಿಣಾಮ ಪೆಟ್ರೋಲ್ ಸೋರಿಕೆ ಆಗಿತ್ತು. ಕೆಲ ಕಾಲ ಆತಂತಕದ ವಾತಾವರಣ ನಿರ್ಮಾವಾಗಿತ್ತು. ಒಟ್ಟು 12 ಸಾವಿರ ಲೀಟರ್ ಪೆಟ್ರೋಲ್ ಇದ್ದ ಟ್ಯಾಂಕರ್ ನಲ್ಲಿ 6 ಸಾವಿರ ಲೀಟರ್ ಪೆಟ್ರೋಲ್ ಸೋರಿಕೆಯಾಗಿದೆ. ಇದರಿಂದಾಗಿ ವಾಹನ ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು.
ಸ್ಥಳಕ್ಕೆ ಎಸ್ಪಿ ಎಸ್.ಜಾಹ್ನವಿ, ಡಿವೈಎಸ್ಪಿ ಡಾ.ಟಿ.ಮಂಜುನಾಥ, ಗ್ರಾಮೀಣ ಠಾಣೆ ಪಿಐ ಗುರುರಾಜ ಕಟ್ಟಿಮನಿ ಇತರರು ಬೇಟಿ ನೀಡಿ ಪರಿಶೀಲಿಸಿದರು. ಪೆಟ್ರೋಲ್ ಸೋರಿಕೆ ಆದ ಸ್ಥಳಕ್ಕೆ ಜನರರನ್ನು ನಿರ್ಭಂದಿಸಿದರು. ಜೆಸಿಬಿಯಿಂದ ಟ್ಯಾಂಕರ್ ಮೇಲೆತ್ತುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.