ರೈತರಿಗೆ ತುಂಬಾ ಕಷ್ಟವಾಗಿದ್ದು, ಮುಂದಿನ ಬೆಳೆಗಳಿಗೆ ಗೊಬ್ಬರ, ಔಷಧಿಗಳನ್ನು ಕೊಡಲು ತುಂಬಾ ತೊಂದರೆಯಾಗಿದೆ. ಜಿಲ್ಲಾಧಿಕಾರಿಗಳು ಆದಷ್ಟು ಬೇಗನೆ ಕಾರ್ಖಾನೆಯ ಮಾಲೀಕರನ್ನು ಕರೆಯಿಸಿ, ವಿಚಾರಿಸಿ ಬಾಕಿ ಹಣವನ್ನು ಕೂಡಲೇ ಕೊಡಿಸಬೇಕು. ಕೃಷಿ ಇಲಾಖೆಯಲ್ಲಿ ಸಬ್ಸಿಸಿಡಿ ರೂಪದಲ್ಲಿ ಬರುವಂತಹ ಸೆಣಬಿಗೆ ಬರಬೇಕಾದಂತಹ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಿ, ಸೆಣಬಿನ ಬೀಜ ವಿತರಿಸಬೇಕು. ಈ ಸರ್ಕಾರದಲ್ಲಿ ಗೊಬ್ಬರವಾಗಲಿ, ಔಷಧಿ ವಿತರಣೆ, ಕೃಷಿಹೊಂಡಗಳ ನಿರ್ಮಾಣಗಳಾಗಲಿ. ತುಂಗಭದ್ರ ಜಲಾಶಯದ ಕ್ರಸ್ಟ್ಗೇಟ್‌ಗಳನ್ನು ಆದಷ್ಟು ಬೇಗ ಅಳವಡಿಕೆಯಾಗಬೇಕು. ಎರಡನೇ ಬೆಳೆ ಬೆಳೆಯದ ರೈತರಿಗೆ ಹೆಕ್ಟೇರ್‌ಗೆ 50 ಸಾವಿರ ರೂ.ನಂತೆ ಪರಿಹಾರವನ್ನು ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ತುಂಗಭದ್ರ ಮಂಡಳಿಯ ಆಡಳಿತ ಕಚೇರಿಗೆ ಬೀಗ ಹಾಕುವ ಮುಖಾಂತರ ಉಗ್ರಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.