ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ವಿ.ಕೆ.ನೇತ್ರಾವತಿ ಅಧ್ಯಕ್ಷತೆಯಲ್ಲಿ ಕಾಯಕ ಶರಣರ ಜಯಂತಿ ಪೂರ್ವಭಾವಿ ಸಭೆ ನಡೆಯಿತು.
Published on:
Copied
Follow Us
ಕೂಡ್ಲಿಗಿ: ಕಾಯಕ ಶರಣರ ಜಯಂತಿಯನ್ನು ಸರಳ ಹಾಗೂ ಅಚ್ಚುಕಟ್ಟಾಗಿ ಆಯೋಜಿಸಬೇಕೆಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ ಮತ್ತು ಉರಿಲಿಂಗಪೆದ್ದಿ ಜಯಂತಿ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಗುರುವಾರ ಮಾತನಾಡಿದರು. ತಾಲೂಕಿನ ಎಲ್ಲ ಗ್ರಾಪಂ ಕಚೇರಿ, ಶಾಲೆ, ಕಾಲೇಜುಗಳಲ್ಲಿ ಮಹನೀಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲು ತಹಸೀಲ್ದಾರ್ ತಿಳಿಸಿದರು. ತಜ್ಞ ಭಾಷಣಕಾರರನ್ನು ಕರೆಯಿಸಬೇಕೆಂದು ಬಿಇಒ ಮೈಲೇಶ್ ಬೇವೂರುಗೆ ತಹಸೀಲ್ದಾರ್ ನೇತ್ರಾವತಿ ಸೂಚಿಸಿದರು.
ಕೆಲ ಗ್ರಾಮಗಳ ಶಾಲೆಗಳಲ್ಲಿ ಕಾಯಕ ಶರಣರ ಫೋಟೋಗಳನ್ನು ಇರಿಸದೆ ಚಿತ್ರಬಿಡಿಸಿ ಪೂಜೆ ಮಾಡುತ್ತಾರೆ, ಇನ್ನು ಕೆಲ ಶಾಲೆಗಳಲ್ಲಿ ಪೂಜೆ ಮಾಡುವುದೇ ಇಲ್ಲ. ಸರ್ಕಾರದ ಸೂಚನೆಗೆ ಬೆಲೆ ಇಲ್ವಾ ಎಂದು ದಲಿತ ಮುಖಂಡರು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದರು. ಈ ರೀತಿಯಲ್ಲಿ ಆಗದಂತೆ ಕ್ರಮವಹಿಸಲು ಬಿಇಒ ಮೈಲೇಶ್ ಬೇವೂರುಗೆ ತಹಸೀಲ್ದಾರ್ ಸೂಚನೆ ನೀಡಿದರು.
ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗುಣಸಾಗರ ಕೃಷ್ಣಪ್ಪ, ಪ್ರಮುಖರಾದ ಎಸ್.ದುರುಗೇಶ್, ಮಹೇಶ್, ಕರಿಬಸಪ್ಪ, ಜಿತೇಂದ್ರ, ಬಡೇಲಡಕು ದುರುಗೇಶ್, ಚೌಡಾಪುರ ಬಸವರಾಜ, ರಮೇಶ್, ಚಂದ್ರು ಗೆದ್ದಲಗಟ್ಟೆ, ಕಾನಮಡಗು ಪಕ್ಕೀರಪ್ಪ, ಮಹೇಶ್ ಇದ್ದರು.