ವಸತಿರಹಿತರ ಪಟ್ಟಿಗೆ ಸೇರಲು ಅವಕಾಶ

ನೊಂಗ್ಟಾಯ್ ಮಹ್ಮದ್ ಅಲಿ ಅಕ್ರಮ್‌ಷಾ
ನೊಂಗ್ಟಾಯ್ ಮಹ್ಮದ್ ಅಲಿ ಅಕ್ರಮ್‌ಷಾ
Published on
ಹೊಸಪೇಟೆ: ಜಿಲ್ಲೆಯ ವಸತಿರಹಿತ ಹಾಗೂ ನಿವೇಶನ ರಹಿತಅರ್ಹ ಫಲಾನುಭವಿಗಳು ಸರಕಾರದ ನಾನಾ ವಸತಿ ಯೋಜನೆಗಳ ಲಾಭಪಡೆಯಲು ಮೇ 15ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುಲು ಅವಕಾಶ ಕಲ್ಪಿಸಲಾಗಿದೆಎಂದುಜಿಪA ಸಿಇಒ ನೊಂಗ್ಟಾಯ್ ಮಹ್ಮದ್ ಅಲಿ ಅಕ್ರಮ್‌ಷಾ ತಿಳಿಸಿದ್ದಾರೆ.
2018ರ ಸಮೀಕ್ಷಾ ಪಟ್ಟಿಯಲ್ಲಿರುವಅನರ್ಹರನ್ನುಕೈಬಿಟ್ಟು, ಬಿಟ್ಟುಹೋಗಿರುವಅರ್ಹ ಫಲಾನುಭವಿಗಳನ್ನು ಸೇರಿಸಲು ಅವಕಾಶ ನೀಡಿದೆ. 2026-27 ಸಾಲಿನ ಆಯವ್ಯಯದಲ್ಲಿರಾಜ್ಯಾದ್ಯಂತ ಬಿಎಲ್‌ಸಿ ಆಧಾರಿತಒಂದು ಲಕ್ಷ ಹೊಸ ಮನೆಗಳ ಗುರಿ ಹಂಚಿಕೆಯಾಗಿದ್ದು, ಆನ್‌ಲೈನ್ ಲಾಟರಿ ಮೂಲಕ ಗ್ರಾಮ ಸಭೆಗಳಲ್ಲಿ ಫಲಾನುಭವಿಗಳ ಆಯ್ಕೆ ನಡೆಯಲಿದೆ.
ನೋಡಿಕೊಳ್ಳುವ ಅರ್ಹ ವಸತಿರಹಿತರ ಹೆಸರನ್ನು ಪಟ್ಟಿಗೆ ಸೇರಿಸಲು ನಿಗದಿಯಾದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ನಂತರ ಪಟ್ಟಿಯನ್ನು ಸ್ಥಗಿತಗೊಳಿಸಲಾಗುವುದು. ಯಾವುದೇಅರ್ಹ ಫಲಾನುಭವಿಗಳು ಪಟ್ಟಿಯಿಂದ ಹೊರಗುಳಿಯದಂತೆ ಜವಾಬ್ದಾರಿಯನ್ನುಆಯಾಗ್ರಾಮ ಪಂಚಾಯಿತಿಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ವಹಿಸಲಾಗಿದೆ. ಒಂದು ವೇಳೆ ಅರ್ಹರನ್ನುಕೈಬಿಟ್ಟಿರುವುದುಕಂಡುಬAದಲ್ಲಿ ಪಿಡಿಒಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದುಎಂದು ಸಿಇಒ ಎಚ್ಚರಿಸಿದ್ದಾರೆ. ವಸತಿರಹಿತ ಸಾರ್ವಜನಿಕರುತಕ್ಷಣವೇತಮ್ಮಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net