ನಿಯಮ ಉಲ್ಲಘಿಸದಂತೆ ಸೂಚನೆ

ಕುರುಗೋಡು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವವರನ್ನು ಠಾಣೆಗೆ ಕರೆಸಿ ತಿಳಿಹೇಳಲಾಯಿತು. ಸಿಪಿಐ ಬಾಳನಗೌಡ ಮಾನಶೆಟ್ಟಿ ಹಾಗೂ ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ  ಇತರರಿದ್ದರು.
ಕುರುಗೋಡು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವವರನ್ನು ಠಾಣೆಗೆ ಕರೆಸಿ ತಿಳಿಹೇಳಲಾಯಿತು. ಸಿಪಿಐ ಬಾಳನಗೌಡ ಮಾನಶೆಟ್ಟಿ ಹಾಗೂ ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದ್ವಿಚಕ್ರ ವಾಹನ
  • ಸವಾರ
  • ಖಾಕಿ ಪಡೆ
ಕುರುಗೋಡು: ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ದಂಡ ಹಾಕುವ ಮೂಲಕ ಸೋಮವಾರ ಬಿಸಿ ಮುಟ್ಟಿಸಿದರು.
ಪಟ್ಟಣದಲ್ಲಿ ಬೆಳಗಿನಿಂದಲೇ ಸಕ್ರಿಯವಾದ ಖಾಕಿ ಪಡೆ ಕಂಪ್ಲಿ, ಬಳ್ಳಾರಿ, ಬಾದನಹಟ್ಟಿ, ಗೆಣಿಕೆಹಾಳ್ ಸೇರಿ ಇತರ ರಸ್ತೆಯಲ್ಲಿ ನಿಯಮ ಉಲ್ಲಂಘಿಸಿದ 30ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಠಾಣೆಗೆ ತರಲಾಯಿತು. ಬಳಿಕ ಸವಾರರಿಗೆ ಅರಿವು ಮೂಡಿಸಲಾಯಿತು.
ಮೊದಲ ದಿನ ಹಿನ್ನೆಲೆ ದಂಡದ ಬದಲು ಕೆಲವರಿಗೆ ಹೆಲ್ಮೆಟ್ ತಂದು ವಾಹನ ಪಡೆಯುವಂತೆ ತಿಳಿಸಲಾಯಿತು. ಪ್ರತಿಯೊಬ್ಬರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ವಾಹನ ಚಲಾಯಿಸಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ದಂಡ ವಿಧಿಸಲಾಗುವುದು ಎಂದು ಸಿ ಪಿ ಐ ಬಾಳನಗೌಡ ಮಾನಶಟ್ಟಿ , ಪಿಎಸ್‌ಐ ವಿರೂಪಾಕ್ಷಪ್ಪ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net