ಚಾಲ್ತಿಯಲ್ಲಿರುವ ಪುರಾತತ್ತ್ವಕಾಯ್ದೆ ಹಾಗೂ ಅಧಿನಿಯಮಗಳ ಪ್ರಕಾರ, ಯಾವುದೇ ಸಂರಕ್ಷಿತ ಸ್ಮಾರಕದ ಸುತ್ತಲಿನ 300 ಮೀಟರ್ ವ್ಯಾಪ್ತಿಯನ್ನು ನಿಯಂತ್ರಿತ ಪ್ರದೇಶ ಎಂದು ಘೋಷಿಸಲಾಗಿದ್ದು, ಇಲ್ಲಿ ಯಾವುದೇ ಹೊಸ ನಿರ್ಮಾಣ ಅಥವಾ ಕಾಮಗಾರಿಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಂಪಿಯ ಐತಿಹಾಸಿಕ ವೈಭವವನ್ನು ಕಾಪಾಡಬೇಕಾದ ಪ್ರಾಧಿಕಾರವೇ ಈ ನಿಯಮವನ್ನು ಉಲ್ಲಂಘಿಸುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಎಂಬAತಾಗಿದೆ. ಸಾರ್ವಜನಿಕರು ಅಥವಾ ಸ್ಥಳೀಯರು ಸಣ್ಣ ಪುಟ್ಟ ದುರಸ್ತಿ ಕಾರ್ಯಕ್ಕೂ ಪರದಾಡುವಂತೆ ಮಾಡುವ ಅಧಿಕಾರಿಗಳು, ತಮ್ಮದೇ ಮೂಗಿನ ನೇರಕ್ಕೆ ಕಾನೂನು ಮುರಿಯುತ್ತಿರುವುದಕ್ಕೆ ಕಡಿವಾಣ ಹಾಕುವವರು ಯಾರು ಎಂಬ ಪ್ರಶ್ನೆ ಎದ್ದಿದೆ.