ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪಾಲಿನ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯವನ್ನು 1953ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯ ಮತ್ತು ಹೈದರಾಬಾದ್ ನಿಜಾಮರ ಸಹಯೋಗದೊಂದಿಗೆ ನಿರ್ಮಿಸಲಾಯಿತು. ಮೂಲತಃ33 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದ ಈ ಜಲಾಶಯ, ಪ್ರಸ್ತುತ ಹೂಳು ತುಂಬಿರುವುದರಿಂದ ಸುಮಾರು 105 ಟಿಎಂಸಿ ಸಾಮರ್ಥ್ಯಕ್ಕೆ ಕುಸಿದಿದೆ. ಆದರೂ ಇದು ಕರ್ನಾಟಕದ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಅಂಧ್ರದ ಕರ್ನೂಲು, ಅನಂತಪುರ ಮತ್ತು ಕಡಪ ಸೇರಿದಂತೆ ಸುಮಾರು 17.3 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಪ್ರಮುಖ ಆಧಾರವಾಗಿದೆ.