ಚೆನ್ನೈನಿಂದ ಬಂದ ಹೊಸ ಚೈನ್‌ಗಳು

ತುಂಗಭದ್ರಾ ಜಲಾಶಯದಲ್ಲಿ ಟಿಬಿಬಿ ಎಇಇಗಳಾದ ಜ್ಞಾನೇಶ್ವರ, ವಿಶ್ವನಾಥ, ಎಸ್ ಒ ಕಿರಣ್ ಕುಮಾರ್ ಅವರು ಚೈನ್ ಅಳವಡಿಕೆ ಕಾರ್ಯ ಪರಿಶೀಲನೆ ನಡೆಸಿದರು.
ತುಂಗಭದ್ರಾ ಜಲಾಶಯದಲ್ಲಿ ಟಿಬಿಬಿ ಎಇಇಗಳಾದ ಜ್ಞಾನೇಶ್ವರ, ವಿಶ್ವನಾಥ, ಎಸ್ ಒ ಕಿರಣ್ ಕುಮಾರ್ ಅವರು ಚೈನ್ ಅಳವಡಿಕೆ ಕಾರ್ಯ ಪರಿಶೀಲನೆ ನಡೆಸಿದರು.
Published on
ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಚೆನ್ನೈನಿಂದ ಹೊಸ ಚೈನ್‌ಗಳು ಬುಧವಾರ ಬಂದಿದ್ದು, ಅಳವಡಿಸುವ ಕಾರ್ಯಕ್ಕೆ ಗುರುವಾರ ತುಂಗಭದ್ರಾ ಜಲಾಶಯ ಮಂಡಳಿ(ಟಿಬಿಬಿ) ಚಾಲನೆ ನೀಡಿದೆ.
ಚೈನ್ ಬದಲಿಸುವ ಕಾರ್ಯಕ್ಕೆ 5.8 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಒಟ್ಟು 66 ಹೊಸ ಚೈನ್‌ಗಳನ್ನು ಚೈನ್ನೈನಲ್ಲಿ ನಿರ್ಮಿಸಲಾಗಿದೆ. ಪ್ರತಿ ಚೈನ್ 1.9 ಟನ್ ತೂಕ ಹೊಂದಿದೆ. 33 ಕ್ರಸ್ಟ್ ಗೇಟ್ ಗಳಿಗೆ ತಲಾ ಎರಡರಂತೆ ಈ ಚೈನ್‌ಗಳನ್ನು ಅಳವಡಿಸಲಾಗುತ್ತದೆ. ಮೊದಲ ಹಂತದಲ್ಲಿ 5 ಚೈನ್‌ಗಳು ಜಲಾಶಯದ ಆವರಣ ತಲುಪಿದ್ದು, ಉಳಿದವು ಹಂತ ಹಂತವಾಗಿ ಬರಲಿವೆ.
ಟಿಬಿಡ್ಯಾಂಗೆ ಬಂದಿರುವೆ ಹೊಸ ಚೈನ್

ಚೈನ್ನೈನಿಂದ ಬುಧವಾರ ಬಂದಿಳಿದಿರುವ ಹೊಸ ಚೈನ್‌ಗಳ ಅಳವಡಿಕೆಗೆ ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಮೇ ಅಂತ್ಯದೊಳಗೆ ಮುಗಿಸಲೇಬೇಕಾದ ಅನಿವಾರ್ಯತೆ ತಾಂತ್ರಿಕ ತಂಡಕ್ಕಿದೆ. ಜಲಾಶಯದ ಒಟ್ಟು 33 ಕ್ರಸ್ಟ್ ಗೇಟ್‌ಗಳ ಪೈಕಿ, ಕೊನೆಯದಾದ 33ನೇ ಕ್ರಸ್ಟ್ಗೇಟ್‌ಗೆ ಮೊದಲು ಚೈನ್ ಅಳವಡಿಸಲು ತೀರ್ಮಾನಿಸಲಾಗಿದೆ. ಹಳೆಯ ಚೈನ್‌ಗಳನ್ನು ತೆರವುಗೊಳಿಸಿ, ಹೊಸದಾಗಿ ಬಂದಿರುವ ಚೈನ್ ಅಳವಡಿಸಿ ಕ್ರಸ್ಟ್ಗೇಟ್‌ಗಳ ಚಾಲನೆಯನ್ನು ಪ್ರಾಯೋಗಿಕವಾಗಿ ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆ ಯಶಸ್ವಿಯಾದಲ್ಲಿ ಉಳಿದ ಕ್ರಸ್ಟ್ಗೇಟ್ ಗಳಿಗೆ ಚೈನ್ ಅಳವಡಿಕೆ ವೇಗ ಪಡೆಯಲಿದೆ.
2025, ಆ.10ರಂದು ಜಲಾಶಯದ 19ನೇ ಕ್ರಸ್ಟ್ಗೇಟ್ ಚೈನ್ ತುಂಡಾಗಿ ಭಾರಿ ದುರಂತ ಸಂಭವಿಸಿತ್ತು. ಅಪಾರ ಪ್ರಮಾಣದ ನೀರು ಹೊರಹರಿದು ಆತಂಕ ಸೃಷ್ಟಿಸಿತ್ತು. ಆ ಸಂದರ್ಭದಲ್ಲಿ ತಾತ್ಕಾಲಿಕ ಸ್ಟಾಪ್ ಲಾಗ್ ಗೇಟ್ ಅಳವಡಿಸಿ ನೀರು ಸಂಗ್ರಹಿಸಿ, ಬೆಳೆಗಳಿಗೆ ಹರಿಸಲಾಗಿತ್ತು. ನಂತರ ಶಾಶ್ವತ ಗೇಟ್ ಅಳವಡಿಸುವ ಮೂಲಕ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಹಳೆಯ ಚೈನ್‌ಗಳನ್ನು ಬದಲಾಯಿಸಲು ತೀರ್ಮಾನಿಸಲಾಗಿದೆ.

ಈ ತಿಂಗಳ ಅಂತ್ಯಕ್ಕೆ ಪೂರ್ಣ

ಒಂದು ಕ್ರಸ್ಟ್ಗೇಟ್‌ಗೆ ಚೈನ್ ಅಳವಡಿಸಲು 2ರಿಂದ 3 ದಿನ ಬೇಕಾಗುತ್ತದೆ. 33ನೇ ಕ್ರಸ್ಟ್ಗೇಟ್‌ನ ಪ್ರಾಯೋಗಿಕ ಅಳವಡಿಕೆ ಯಶಸ್ವಿಯಾದ ನಂತರ, ಕೆಲಸದ ವೇಗ ಹೆಚ್ಚಿಸಲು ಹೆಚ್ಚುವರಿ ತಾಂತ್ರಿಕ ತಂಡಗಳನ್ನು ನಿಯೋಜಿಸಲು ಅಧಿಕಾರಿಗಳು ಯೋಜಿಸಿದ್ದಾರೆ. ಇದೇ ತಿಂಗಳ ಅಂತ್ಯಕ್ಕೆ ಎಲ್ಲ ಕ್ರಸ್ಟ್ಗೇಟ್ ಗಳ ಚೈನ್ ಅಳವಡಿಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಜಲಾಶಯದಲ್ಲಿ ಸದ್ಯ ಕ್ರಸ್ಟ್ಗೇಟ್ ಗಳಿಗೆ ಬಣ್ಣ ಲೇಪಿಸುವ ಕೆಲಸ ಭರದಿಂದ ಸಾಗಿದೆ. ಒಂದೆರಡು ಕ್ರಸ್ಟ್ಗೇಟ್‌ಗಳ ವೆಲ್ಡಿಂಗ್ ಕೆಲಸ ಅಂತಿಮ ಹಂತದಲ್ಲಿದೆ. ಚೈನ್ ಅಳವಡಿಕೆಗೆ ಪೂರಕವಾದ ಸಿದ್ದತೆಗಳು ಚುರುಕು ಪಡೆದಿವೆ. ಜಲಾಶಯದ ಎಲ್ಲ 33 ಕ್ರಸ್ಟ್ಗೇಟ್ ಗಳಿಗೆ ಹೊಸ ಚೈನ್ ಅಳವಡಿಸುತ್ತಿರುವುದು ಜಲಾಶಯದ ಆಯಸ್ಸು ಮತ್ತು ಭದ್ರತೆಯನ್ನು ಹೆಚ್ಚಿಸುವ ಆಶಾಭಾವ ಮೂಡಿಸಿದೆ.
"

ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ಗೇಟ್‌ಗಳ ಅಳವಡಿಕೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕ್ರಸ್ಟ್ಗೇಟ್ ಗಳಿಗೆ ಹೊಸ ಚೈನ್ ಅಳವಡಿಕೆಗೆ ಚಾಲನೆ ನೀಡಿಲಾಗಿದೆ. ಬಾಕಿ ಕೆಲಸಗಳನ್ನು ಇದೇ ತಿಂಗಳಅAತ್ಯದೊಳಗೆ ಪೂರ್ಣಗೊಳಿಸಲಾಗುವುದು.

— ಒ.ಆರ್.ಕೆ.ರೆಡ್ಡಿ ಕಾರ್ಯದರ್ಶಿ, ಟಿಬಿಬಿ, ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net