ರಸ್ತೆಗಿಳಿಯದ ಸಾವಿರಕ್ಕೂ ಹೆಚ್ಚು ಆಟೋಗಳು

ಹೊಸಪೇಟೆಯಲ್ಲಿ ಬಂದ್ ಆಗಿರುವ ಆಟೋ ಗ್ಯಾಸ್ ಬ್ಯಾಂಕ್
ಹೊಸಪೇಟೆಯಲ್ಲಿ ಬಂದ್ ಆಗಿರುವ ಆಟೋ ಗ್ಯಾಸ್ ಬ್ಯಾಂಕ್
Published on

ಪ್ರಮುಖ ಮುಖ್ಯಾಂಶಗಳು

  • ಎಲ್ಪಿಜಿ ಕೊರತೆ,
  • ದರವೂ ದುಬಾರಿ
  • ಚಾಲಕರ ಬದುಕು ಅತಂತ್ರ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಿಲ್ಲೆಯಲ್ಲಿ ಎಲ್ಪಿಜಿ ಸಮಸ್ಯೆ ದಿನೇ ದಿನೆ ಬಿಗಡಾಯಿಸುತ್ತಿದೆ. ಆಟೋ ಎಲ್ಪಿಜಿ ಕೊರತೆಯಿಂದಾಗಿ ನಗರದಲ್ಲಿ ಮೂರ ಬಂಕ್‌ಗಳ ಪೈಕಿ ಎರಡು ಬಾಗಿಲು ಮುಚ್ಚಿವೆ. ಇದರಿಂದಾಗಿ ಆಟೋಗಳ ಚಾಲಕರು ಮತ್ತು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಹೊಸಪೇಟೆಯಲ್ಲಿ ಮೂರು ಎಲ್ಪಿಜಿ ಬಂಕ್‌ಗಳಿದ್ದು, ಗ್ಯಾಸ್ ಸರಬರಾಜು ಇಲ್ಲದೆ ಎರಡು ಬಂದ್ ಆಗಿವೆ. ಎಲ್ಪಿಜಿ ಅಲಭ್ಯತೆ ಬಗ್ಗೆ ಬ್ಯಾನರ್ ಆಳವಡಿಸಿ ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ. ಎಲ್ಪಿಜಿ ಸಿಗದ ಪರಿಣಾಮ ಬಹುತೇಕ ಆಟೋ ಚಾಲಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಆಟೋಗಳನ್ನು ಮನೆ ಮುಂದೆ ನಿಲ್ಲಿಸಿ ಬೇರೆ ಕೆಲಸ ಮಾಡುವಂತಾಗಿದೆ. ಕೆಲ ಆಟೋಗಳ ಚಾಲಕರು ಗೃಹಬಳಕೆ ಎಲ್ಪಿಜಿ ಸಿಲಿಂಡರ್‌ಗಳನ್ನು ಬಳಸಿ ಆಟೋಗಳನ್ನು ಚಾಲನೆ ಮಾಡುತ್ತಾ ಹೊಟ್ಟೆ ಹೊರೆಯುತ್ತಿದ್ದಾರೆ. ಎಲ್ಪಿಜಿ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ಪಾಡೇನು ಎಂಬ ಆತಂಕದಲ್ಲಿದ್ದಾರೆ.
ಸಾಕಷ್ಟು ಜನರು ಬೇರೆ ಯಾವುದೇ ಉದ್ಯೋಗ ಸಿಗದಿದ್ದಾಗ ಆಟೋಗಳನ್ನು ಖರೀದಿಸಿ ಅಥವಾ ಬಾಡಿಗೆ ಪಡೆದು ಚಾಲನೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಓದು ನಿಲ್ಲಿಸಿದ ಬಹುತೇಕ ಯುವಕರು ಆಟೋ ಚಾಲನೆಯತ್ತ ವಾಲುತ್ತಿದ್ದಾರೆ. ಇದೀಗ ಅವರೆಲ್ಲರ ಬದುಕು ಅತಂತ್ರವಾಗಿದೆ. ಇಎಂಐ ಕಟ್ಟುವುದು, ಜತೆಗೆ ಕೈ ಸಾಲ ಕೂಡ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆ ಶುಲ್ಕ ಕಟ್ಟುಬೇಕು. ಇದರಿಂದಾಗಿ ಆಟೋ ಚಾಲಕರು ಹಾಗೂ ಮಾಲಿಕರಿಗೆ ಆರ್ಥಿಕ ಹೊರೆಯಾಗಿದೆ.
==ಗ್ರಹಕರಿಗೆ ಬೆಲೆ ಏರಿಕೆ ಬಿಸಿ==
ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಎಲ್ಪಿಜಿ ಅವಲಂಬಿತ ಆಟೋಗಳಿವೆ. ಈ ಪೈಕಿ ಒಂದು ಸಾವಿರಕ್ಕೂ ಹೆಚ್ಚು ಆಟೋಗಳು ಗ್ಯಾಸ್ ಕೊರತೆಯಿಂದಾಗಿ ಸಂಚಾರ ಸ್ಥಗಿತಗೊಳಿಸಿವೆ. ಸದ್ಯ ಒಂದು ಲೀಟರ್‌ಗೆ 120 ರೂ.ಯಂತೆ ಆಟೋ ಎಲ್ಪಿಜಿ ಮಾರಾಟ ಮಾಡಲಾಗುತ್ತಿದೆ. ಕೊರತೆಯೊಂದಿಗೆ ಗ್ಯಾಸ್ ದರ ಹೆಚ್ಚಳದ ಹೊಡೆತವೂ ಆಟೋ ಚಾಲಕರ ಮೇಲೆ ಬಿದ್ದಿದೆ. ಹೀಗಾಗಿ ಈ ಹೊರೆಯನ್ನು ಪ್ರಯಾಣಿಕರ ಮೇಲೆ ಹಾಕುವ ಪ್ರಯತ್ನ ನಡೆಯುತ್ತಿದೆ.
==ದುಪ್ಪಟ್ಟು ಬೆಲೆ ಏರಿಕೆ==
ಮಧ್ಯಪ್ರಾಚ್ಯ ಯುದ್ಧ ಸಂಘರ್ಷದಿಂದಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಆಟೋ ಎಲ್ಪಿಜಿ ದರವನ್ನು ದಿಢೀರನೆ ಹೆಚ್ಚಿಸಲಾಗಿದೆ. ಫೆ.28ರ ಮುನ್ನ ಲೀಟರ್‌ಗೆ 54 ರೂ. ಇದ್ದು, ಫೆ.28ಕ್ಕೆ 68 ರೂ.ಗೆ ಏರಿಸಲಾಯಿತು. ನಂತರ 84 ರೂ., 94 ರೂ., 100 ರೂ.ಗೆ ಏರಿಕೆ ಆಗಿತ್ತು. ಶುಕ್ರವಾರ 120 ರೂ.ಗೆ ಹೆಚ್ಚಿಸಲಾಗಿದೆ. ಒಂದು ತಿಂಗಳಲ್ಲಿ ಎರಡು ಪಟ್ಟು ಬೆಲೆ ಏರಿಕೆಯಾಗಿರುವುದು ಆಟೋ ಚಾಲಕರನ್ನು ಕಂಗೆಡಿಸಿದೆ.
----------------
==ಕೋಟ್==
ಆಟೋ ಗ್ಯಾಸ್ ಬೆಲೆ ದಿನೇ ದಿನೆ ಹೆಚ್ಚಳ ಆಗುತ್ತಿದೆ. ಇದರಿಂದ ಬಹುತೇಕ ಆಟೋಗಳು ರಸ್ತೆಗೆ ಇಳಿಯದೆ ಮನೆ ಮುಂದೆ ನಿಂತಿವೆ. ಸರ್ಕಾರಗಳು ಆಟೋ ಚಾಲಕರ ಸಮಸ್ಯೆಯನ್ನು ಕೇಳಿ ಪರಿಹರಿಸಬೇಕು.
ಕೆ.ಎಂ.ಸಂತೋಷ್
ಸಂಘಟಕ, ಆಟೋ ಯೂನಿಯನ್, ವಿಜಯನಗರ
---------------
10 ಮಂಜು 01
ಹೊಸಪೇಟೆಯಲ್ಲಿ ಆಟೋ ಎಲ್ಪಿಜಿ ಬಂಕ್ ಬಂದ್ ಆಗಿರುವುದು.
10 ಮಂಜು 02
ಕೆ.ಎಂ.ಸಂತೋಷ್
======
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net