ನಾಯಿಗಳ ದಾಳಿಗೆ 30ಕ್ಕೂ ಹೆಚ್ಚು ಕುರಿಗಳು ಬಲಿ

ನಾಯಿದಾಳಿಗೆ ಬಲಿಯಾಗಿರುವ ಕುರಿಗಳು
ನಾಯಿದಾಳಿಗೆ ಬಲಿಯಾಗಿರುವ ಕುರಿಗಳು
Published on

ಹೊಸಪೇಟೆ: ಹರಪ್ಪನಹಳ್ಳಿ ತಾಲೂಕಿನ ನೆರೆ ಬೊಮ್ಮನಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳು ಅಟ್ಟಹಾಸ ಮೆರೆದಿದ್ದು, ಬರೋಬ್ಬರಿ 30ಕ್ಕೂ ಹೆಚ್ಚು ಕುರಿಗಳನ್ನು ಕೊಂದಿರುವ ಘಟನೆ ಸಂಭವಿಸಿದೆ.

ಗ್ರಾಮದ ರಾಜಪ್ಪ ಎಂಬುವವರಿಗೆ ಸೇರಿದ ಕುರಿಗಳು ಇವಾಗಿದ್ದು, ಎಂದಿನಂತೆ ರಾತ್ರಿ ವೇಳೆ ಜಮೀನಿನಲ್ಲಿ ಕುರಿಗಳನ್ನು ಕಟ್ಟಿ ಹಾಕಿ ಮಾಲೀಕರು ಅಲ್ಲೇ ಮಲಗಿದ್ದರು.

ಈ ವೇಳೆ ಏಕಾಏಕಿ ನುಗ್ಗಿದ ಐದಾರು ಬೀದಿ ನಾಯಿಗಳ ಹಿಂಡು, ಕುರಿಗಳ ಮೇಲೆ ಭೀಕರ ದಾಳಿ ನಡೆಸಿ ಸಿಕ್ಕ ಸಿಕ್ಕ ಹಾಗೆ ಕಚ್ಚಿ ಹಾಕಿವೆ. ನಾಯಿಗಳ ರಣಾಕ್ರಂದನಕ್ಕೆ 30ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಾಲೀಕ ರಾಜಪ್ಪ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಜೀವನೋಪಾಯವಾಗಿದ್ದ ಕುರಿಗಳನ್ನು ಕಳೆದುಕೊಂಡು ರೈತ ಕಣ್ಣೀರುಡುತ್ತಿದ್ದಾನೆ.

ಘಟನೆ ನಡೆದು ಇಷ್ಟೊಂದು ದೊಡ್ಡ ಪ್ರಮಾಣದ ಹಾನಿಯಾಗಿದ್ದರೂ ಸಹ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡದಿರುವುದು ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಸಂತ್ರಸ್ತ ಕುರಿ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಗ್ರಾಮದಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂದು ರೈತರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net