ಮನುಕುಲದ ಏಕತೆ ಕಾಣುವಂತಾಗಲಿ

ಕೊಟ್ಟೂರು ತಾಲೂಕು ಕಚೇರಿಯಲ್ಲಿ ವಿಶ್ವಮಾನವ ದಿನ ಆಚರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಎಂ ಪ್ರತಿಭಾ, ಉಪತಹಸೀಲ್ದಾರ್ ಅನ್ನದಾನೇಶ ಬಿ ಪತ್ತಾರ್, ಶಿರಸ್ತೇದಾರ್ ಎಚ್.ಎಂ.ಕೊಟ್ರಮ್ಮ, ಸಿಬ್ಬಂದಿ ಇದ್ದರು.
ಕೊಟ್ಟೂರು ತಾಲೂಕು ಕಚೇರಿಯಲ್ಲಿ ವಿಶ್ವಮಾನವ ದಿನ ಆಚರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಎಂ ಪ್ರತಿಭಾ, ಉಪತಹಸೀಲ್ದಾರ್ ಅನ್ನದಾನೇಶ ಬಿ ಪತ್ತಾರ್, ಶಿರಸ್ತೇದಾರ್ ಎಚ್.ಎಂ.ಕೊಟ್ರಮ್ಮ, ಸಿಬ್ಬಂದಿ ಇದ್ದರು.
Published on
ಕೊಟ್ಟೂರು: ಹುಟ್ಟುವ ಪ್ರತಿ ಮಗು ವಿಶ್ವಮಾನವನೇ ಹೊರತು ಯಾವುದೇ ಜಾತಿ, ಮತದವನಲ್ಲ ಎನ್ನುವ ಕಲ್ಪನೆ ಹೊಂದಿದ್ದ ಹಿನ್ನೆಲೆಯಲ್ಲಿ ಕುವೆಂಪು ಅವರನ್ನು ವಿಶ್ವಮಾನವ ಎಂದು ಕರೆಯಲಾಗುತ್ತದೆ ಎಂದು ಗ್ರೇಡ್-2 ತಹಸೀಲ್ದಾರ್ ಎಂ.ಪ್ರತಿಭಾ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುವೆಂಪು ಅವರು ಜಾತಿ, ಮತ, ದೇಶಗಳ ಗಡಿಗಳನ್ನು ಮೀರಿ ಎಲ್ಲರನ್ನೂ ಸಮನಾಗಿ ವಿಶಾಲ ಮನೋಭಾವನೆಯಿಂದ ಕಂಡಿದ್ದರಿಂದ ಸರ್ಕಾರ ಕುವೆಂಪು ಜನ್ಮದಿನವನ್ನು ಡಿ.29 ರಂದು ವಿಶ್ವಮಾನವ ದಿನ ಆಚರಿಸುತ್ತಿದೆ ಎಂದರು.
ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗದೆ, ವ್ಯಕ್ತಿತ್ವದಿಂದ ಮುಖ್ಯವಾಗಬೇಕು. ವೈಚಾರಿಕ ದೃಷ್ಟಿಕೋನ ಬೆಳೆಸಿಕೊಂಡು ಮನುಕುಲದ ಏಕತೆ ಕಾಣಬೇಕು. ಮನುಜ ಮತ ವಿಶ್ವಪಥ ಎಂಬ ಕುವೆಂಪು ಅವರ ಸಂದೇಶವನ್ನು ಸಮಾನತೆ, ಸಹೋದರತ್ವ ಮತ್ತು ಶಾಂತಿಯನ್ನು ಸ್ಥಾಪಿಸುವ ಮೂಲಕ ನಾವೆಲ್ಲ ಅನುಸಿರಿಕೊಂಡು ಹೋಗಬೇಕಿದೆ ಎಂದು ಗ್ರೇಡ್-2 ತಹಸೀಲ್ದಾರ್ ಎಂ.ಪ್ರತಿಭಾ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net