ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ಜಲಾಶಯದ ಕೈಗೆತ್ತಿಕೊಳ್ಳಲಾಗಿರುವ ಕ್ರಸ್ಟ್ಗೇಟ್‌ಗಳ ಆಧುನೀಕರಣ ಕಾಮಗಾರಿ ವೇಗವಾಗಿ ಸಾಗಿದೆ. ತಂತ್ರಜ್ಞರ ತಂಡ ಮತ್ತು ಮುಖ್ಯ ಎಂಜಿನಿಯರ್‌ಗಳ ಸಲಹೆಯಂತೆ ಅತ್ಯಂತ ಎಚ್ಚರಿಕೆಯಿಂದ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ. ಎಪ್ರೀಲ್ ಕೊನೆ ವಾರದಲ್ಲಿ ಎಲ್ಲ ಕ್ರಸ್ಟ್ಗೇಟ್‌ಗಳ ಅಳವಡಿಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೇ ಅಂತ್ಯದ ವೇಳೆಗೆ ಎಲ್ಲ ಗೇಟ್ ಅಳವಡಿಕೆ ಪೂರ್ಣಗೊಳ್ಳಲಿ ಎಂದರು.