ಪಿಯು ಫಲಿತಾಂಶ ಸುಧಾರಣೆಗೆ ಹಲವು ಸೂತ್ರ

AI
AI
Published on

ಪ್ರಮುಖ ಮುಖ್ಯಾಂಶಗಳು

  • ದ್ವಿತೀಯ ಪಿಯುಸಿ ಪರೀಕ್ಷೆಗೆ ತಯಾರಿ
  • 10ರೊಳಗಿನ ಸ್ಥಾನದ ಗುರಿ
  • ಪರೀಕ್ಷೆ ಬರೆಯಲಿದ್ದಾರೆ 12648 ವಿದ್ಯಾರ್ಥಿಗಳು
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಜಿಲ್ಲೆಗೆ 10ರೊಳಗಿನ ಸ್ಥಾನ ಶರುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗ ಹಲವು ಸೂತ್ರಗಳಡಿ ಕಾರ್ಯಕ್ರಮ ರೂಪಿಸಿದೆ.
ಫೆ.28 ರಿಂದ ಮಾ. 17ರ ವರೆಗೆ ದ್ವಿತೀಯ ಪರೀಕ್ಷೆ ನಡೆಯಲಿದ್ದು, ಒಟ್ಟು 12648 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಅಣಿಯಾಗುತ್ತಿದ್ದಾರೆ. 2024ರಲ್ಲಿ ಶೇ.70 ಅಂಕ ಪಡೆದು ರಾಜ್ಯದಲ್ಲಿ 25ನೇ ಸ್ಥಾನ ಇದ್ದ ವಿಜಯನಗರ, ಕಳೆದ ಬಾರಿ ಪರೀಕ್ಷೆಯಲ್ಲಿ ಶೇ.67.4ರಷ್ಟು ಅಂಕಗಳನ್ನು ಪಡೆದು ಜಿಲ್ಲೆಗೆ 27ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ, ಈ ಬಾರಿ 10ರೊಳಗಿನ ಸ್ಥಾನ ಪಡೆಯಬೇಕೆಂಬ ಗುರಿಯೊಂದಿಗೆ ಆರಂಭದಿAದಲೇ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿ ನಾಗರಾಜ್ ಹವಾಲ್ದಾರ್ ತಿಳಿಸಿದ್ದಾರೆ.
ಪಿಯುಸಿ ಉಪನ್ಯಾಸಕರಿಗೆ ಮೂರಾಲ್ಕು ಕಾರ್ಯಾಗಾರಗಳನ್ನು ನಡೆಸುವ ಮೂಲಕ ಪಠ್ಯ ಕ್ರಮದ ಬಗ್ಗೆ ಹಾಗೂ ಪ್ರಶ್ನೆ ಪತ್ರಿಕೆ ಮಾದರಿ, ಅದಕ್ಕೆ ವಿದ್ಯಾರ್ಥಿಗಳನ್ನು ಹೇಗೆ ಅಣಿಗೊಳಿಸಬೇಕೆಂಬ ಕುರಿತಾಗಿ ತರಬೇತಿ ನಡೆಸಲಾಗಿದೆ. ಅಲ್ಲದೇ ವಿಷಯವಾರು ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ ಪ್ರತಿ ವಿಷಯಕ್ಕೂ ಟೆಸ್ಟ್ಗಳನ್ನು ನಿಯಬುತವಾಗಿ ನಡೆಸುತ್ತಾ ಬರಲಾಗಿದೆ. ಇದರೊಂದಿಗೆ ಎಲ್ಲ ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ಎರಡು ಟೆಸ್ಟ್ ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳು, ಮಧ್ಯ ವಾರ್ಷಿಕ ಪರೀಕ್ಷೆಗಳನ್ನು ನಡೆಸಿ, ವಿದ್ಯಾರ್ಥಿಗಳ ವಯಕ್ತಿಕ ಅಂಕ ಸಾಧನೆ ಪರಿಶೀಲಿಸಲಾಗಿದೆ. ಇದರಿಂದ ಪ್ರತಿ ವಿದ್ಯಾರ್ಥಿಗಳ ಫಲಿತಾಂಶದ ಗುಣಮಟ್ಟ ದೊರೆತಿದೆ. ಇದರ ಮೇಲೆ ಯಾರಿಗೆ ಯಾವ ವಿಷಯದಲ್ಲಿ ಹೆಚ್ಚಿನ ಬೋಧನೆ ಬೇಕಿದೆ ಎಂಬುದನ್ನು ಮನಗಂಡು ಹೆಚ್ಚಿನ ಗಮನಹರಿಸಲಾಗಿದೆ ಎಂದು ತಿಳಿಸಿದರು.

ಪೋಷಕರಿಂದ ವಿದ್ಯಾರ್ಥಿಗಳ ಮಾಹಿತಿ

ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಮೂರು ಬಾರಿ ಪೋಷಕರ ಸಭೆಯನ್ನು ಆಯಾ ಕಾಲೇಜುಗಳಲ್ಲಿ ನಡೆಸಲಾಗಿದೆ. ಸಭೆಯಲ್ಲಿ ಪ್ರತಿ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆ, ಅವರ ಹವ್ಯಾಸ, ಓದಿನ ಬಗ್ಗೆ ಅವರ ಪೋಷಕರಿಂದ ಮಾಹಿತಿ ಪಡೆಯಲಾಗಿದೆ. ಅದರ ಅನುಸಾರವೂ ವಿದ್ಯಾರ್ಥಿಗಳ ವೈಯಕ್ತಿಕ ಪ್ರಗತಿಯನ್ನು ಗಮನಿಸುತ್ತಾ ಬರಲಾಗಿದೆ. ಪೋಷಕರು ಸಹ ಇಲಾಖೆಯೊಂದಿಗೆ ಸಹಕಾರ ನೀಡುತ್ತಿದ್ದು, ಉತ್ತು ಫಲಿತಾಂಶಕ್ಕೆ ಜತೆಯಾಗಿದ್ದಾರೆ. ನಾವು ನಡೆಸಿರುವ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಾರ್ಗದರ್ಶನ, ಬೋಧನೆ ಪ್ರಕಾರ ಎಲ್ಲವೂ ಅಂದುಕೊAಡAತೆ ನಡೆದರೆ ಜಿಲ್ಲೆಗೆ 10ರೊಳಗಿನ ಫಲಿತಾಂಶ ಬರಲಿದೆ ಎನ್ನುತ್ತಾರೆ ಅಧಿಕಾರಿಗಳು.

ವೆಬ್‌ಕ್ಯಾಸ್ಟಿಂಗ್ ಕಾವಲು

ಪರೀಕ್ಷೆ ಕೇಂದ್ರಗಳಲ್ಲಿ ಯಾವುದೇ ನಕಲು, ಪರೀಕ್ಷೆ ಅಕ್ರಮಗಳಿಗೆ ಆವಕಾಶವೇ ಇರುವುದಿಲ್ಲ, ಎಲ್ಲವೂ ಕಟ್ಟುನಿಟ್ಟಿಗಿ ನಡೆಯಲಿದೆ. ಅದಕ್ಕಾಗಿ ಎಲ್ಲ ಪರೀಕ್ಷೆ ಕೇಂದ್ರಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದ್ದು, ವೆಬ್ ಕ್ಯಾಸ್ಟಿಂಗ್ ಇರಲಿದೆ. ಪ್ರತಿ ಕೊಠಡಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಬಹುದಾಗಿರುತ್ತದೆ. ಅಲ್ಲದೇ ಪರೀಕ್ಷೆ ಕೇಂದ್ರಗಳು ಸಹ ಸುಸಜ್ಜಿತವಾಗಿರಲಿದೆ. ಮಕ್ಕಳಿಗೆ ಕುಡಿವ ನೀರು, ಫ್ಯಾನ್, ಬೆಳಕಿನ ವ್ಯವಸ್ಥೆ ಉತ್ತಮವಾಗಿರುವಂತೆ ಎಲ್ಲವ್ಯವಸ್ಥೆ ಮಾಡುತ್ತೆವೆ ಎಂದು ಅಧಿಕಾರಿಗಳ ಮಾತಾಗಿದೆ.

ಸುಧಾರಣಾ ಸಮಿತಿ ರಚನೆ

ತಾಲೂಕುವಾರು ಫಲಿತಾಂಶ ಸುಧಾರಣಾ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಮುಖ್ಯಸ್ತರು ಪ್ರತಿ ಕಾಲೇಜಿಗೂ ನಿಯಮಿತವಾಗಿ ಭೇಟಿ ನೀಡುತ್ತಿದ್ದು, ಅಲ್ಲಿನ ಪ್ರಗತಿ ಪರಿಶೀಲಿಸುತ್ತಾ ಬಂದಿದ್ದಾರೆ. ಪ್ರತಿ ತಿಂಗಳು ಸಭೆ ನಡೆಸುವ ಮೂಲಕ ಮೌಲ್ಯಾಂಕನ ನಡೆಸಲಾಗುತ್ತಿದೆ. ಇದರೊಂದಿಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಷಯವಾರು ಉಪನ್ಯಾಸಕರ ಮೂಲಕ ವಿಶೇಷ ತರಗತಿಗಳ ಮೂಲಕ ಅವರನ್ನು ಉತ್ತೀರ್ಣಗೊಳಿಸಲು ಬೇಕಾದ ಸಲಹೆಗಳು, ಪರೀಕ್ಷೆ ಎದುರಿಸಲು ಬೇಕಾದ ಆತ್ಮಸ್ಥೆರ್ಯ, ಹೆಚ್ಚಿನ ಬೋಧನೆಯನ್ನು ಮಾಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಆಯಾ ವಿಷಯದ ಉಪನ್ಯಾಸಕರು ದತ್ತು ಸ್ವೀಕಾರ ಮಾದರಿಯಲ್ಲಿ ನಿಗಾ ವಹಿಸಿ, ಅವರತ್ತ ವಿಶೇಷ ಗಮನ ಹರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.
"

ಎಲ್ಲಾ ಕಾಲೇಜಿಗೂ ನಿಯಮಿತವಾಗಿ ಭೇಟಿ ನೀಡುತ್ತಲೇ ಅಲ್ಲಿನ ಬೋಧನಾ ಕ್ರಮ, ವಿದ್ಯಾರ್ಥಿಗಳ ಕಾರ್ಯಚಟುವಟಿಕೆ, ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿನ ಸಾಧನೆಯನ್ನು ಗಮನಿಸಲಾಗುತ್ತಿದೆ. ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಹಲವು ಸೂತ್ರದಡಿ ಕಾರ್ಯಕ್ರಮ ರೂಪಿಸಿ, ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ. 10ರೊಳಗಿನ ಸ್ಥಾನ ಪಡೆಯುವುದು ನಮ್ಮ ಗುರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net