ಹಸ್ತಪ್ರತಿ ಬದುಕು ಬದಲಿಸುವ ಶಾಸ್ತ್ರ

ಕನ್ನಡ ವಿವಿಯಯ ಹಸ್ತಪ್ರತಿಶಾಸ್ತ್ರ ವಿಭಾಗದಿಂದ ನಡೆದ ವಿದ್ಯಾರ್ಥಿಗಳ ಸಮಾವೇಶ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಉದ್ಘಾಟಿಸಿದರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯ ಕುಲಸಚಿವ ಡಾ.ಎ.ಚೆನ್ನಪ್ಪ, ಪ್ರಾಧ್ಯಾಪಕರಾದ ಡಾ.ಎಸ್.ಆರ್.ಚನ್ನವೀರಪ್ಪ, ಡಾ. ವೀರೇಶ ಬಡಿಗೇರ, ಡಾ.ಎನ್.ಈರಣ್ಣ, ಉಪನ್ಯಾಸಕರಾದ ಅನ್ನದಾನೇಶ್ವರಿ, ಡಾ.ಕಲ್ಲಯ್ಯ ಹಿರೇಮಠ ಇತರರಿದ್ದರು.
ಕನ್ನಡ ವಿವಿಯಯ ಹಸ್ತಪ್ರತಿಶಾಸ್ತ್ರ ವಿಭಾಗದಿಂದ ನಡೆದ ವಿದ್ಯಾರ್ಥಿಗಳ ಸಮಾವೇಶ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಉದ್ಘಾಟಿಸಿದರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯ ಕುಲಸಚಿವ ಡಾ.ಎ.ಚೆನ್ನಪ್ಪ, ಪ್ರಾಧ್ಯಾಪಕರಾದ ಡಾ.ಎಸ್.ಆರ್.ಚನ್ನವೀರಪ್ಪ, ಡಾ. ವೀರೇಶ ಬಡಿಗೇರ, ಡಾ.ಎನ್.ಈರಣ್ಣ, ಉಪನ್ಯಾಸಕರಾದ ಅನ್ನದಾನೇಶ್ವರಿ, ಡಾ.ಕಲ್ಲಯ್ಯ ಹಿರೇಮಠ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ವಿವಿಯ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅಭಿಪ್ರಾಯ
ಹೊಸಪೇಟೆ: ಹಸ್ತಪ್ರತಿಶಾಸ್ತç ವಿಭಾಗ ಬೋಧನೆ ಪ್ರಕಟಣೆ ಮತ್ತು ಸಂಶೋಧನೆಯ ಜತೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ವಿವಿಯವನ್ನು ಗುರುತಿಸುವಂತೆ ಮಾಡಿದೆ ಎಂದು ಕನ್ನಡ ವಿವಿಯ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ತಿಳಿಸಿದರು.
ಕನ್ನಡ ವಿವಿಯ ಹಸ್ತಪ್ರತಿಶಾಸ್ತ್ರ ವಿಭಾಗದಿಂದ ವಿದ್ಯಾರ್ಥಿಗಳ ಸಮಾವೇಶ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಸ್ತಪ್ರತಿಶಾಸ್ತ್ರ ಎಂಬುದು ಬಹಳ ಕಠಿಣವಾದ ಸಂದರ್ಭದಲ್ಲಿ ಸಾವಿರಾರು ಹಸ್ತಪ್ರತಿಗಳನ್ನು ಸಂಗ್ರಹಿಸಿ, ಪೋಷಿಸಿ, ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಕೃತಿಗಳ ಮೂಲಕ ಹಸ್ತಪ್ರತಿಗಳ ಮಾಹಿತಿಯನ್ನು ತಿಳಿಸಿರುವುದು ಶ್ಲಾಘನೀಯ. ನಾಡಿನಾದ್ಯಂತ ಇಲ್ಲಿಯವರೆಗೆ 22 ಹಸ್ತಪ್ರತಿಶಾಸ್ತ್ರದ ಸಮ್ಮೇಳನಗಳ ನಡೆದಿದ್ದು, ಜ್ಞಾನವನ್ನು ಜನಸಾಮಾನ್ಯರಿಗೂ ತಲುಪಿಸುವಂತಹ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಹಸ್ತಪ್ರತಿಗಳ ಮೌಲ್ಯವನ್ನು, ಜ್ಞಾನವನ್ನು, ತಿಳುವಳಿಕೆಯನ್ನು ಪ್ರಪಂಚದಾದ್ಯಂತ ವಿಸ್ತರಿಸುವ ಕೆಲಸ ಮಾಡಬೇಕಿದೆ ಎಂದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯ ಕುಲಸಚಿವ ಡಾ.ಎ.ಚೆನ್ನಪ್ಪ ಮಾತನಾಡಿ, ಹಸ್ತಪ್ರತಿಶಾಸ್ತ್ರವನ್ನು ಅಧ್ಯಯನ ಮಾಡುತ್ತ ಆಳಕ್ಕೆ ಇಳಿದರೆ ದೇಗುಲವನ್ನು ಪ್ರವೇಶಿಸಿದಂತೆ ಎಂಬ ಅರ್ಥದಲ್ಲಿ ನಾಡಿಗೆ ಮತ್ತು ರಾಷ್ಟ್ರಕ್ಕೆ ಜ್ಞಾನವನ್ನು ತಿಳಿಸುವುದು ಅತ್ಯವಶ್ಯಕವಾಗಿದೆ. ಯುವಜನ, ಸಾಹಿತಿಗಳು ಕಲಿಕೆಗೆ ಹೆಚ್ಚಿನ ಆಸಕ್ತಿಯನ್ನು ವಹಿಸಿ ಹಸ್ತಪ್ರತಿಗಳಲ್ಲಿನ ವಿಷಯವನ್ನು ಅಧ್ಯಯನ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಹಲವು ಕೃತಿಗಳನ್ನು ಪ್ರಕಟಿಸಬೇಕು ಎಂದರು.
ಹಸ್ತಪ್ರತಿಶಾಸ್ತç ಪ್ರಾಧ್ಯಾಪಕ ಡಾ.ಎಫ್.ಟಿ. ಹಳ್ಳಿಕೇರಿ ಮಾತನಾಡಿ, ಆಧುನಿಕ ಬರವಣಿಗೆಯ ಕೃತಿಗಳು ಇಲ್ಲಿಯ ವರೆಗೆ ಅಂದಾಜು 35ಕ್ಕೂ ಹೆಚ್ಚು ಗ್ರಂಥಗಳನ್ನು ಹಸ್ತಪ್ರತಿಶಾಸ್ತ್ರ ಅಧ್ಯಯನ ವಿಭಾಗದಿಂದ ಬಿಡುಗಡೆ ಮಾಡಲಾಗಿದೆ ಎಂದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯ ಕುಲಸಚಿವ ಡಾ.ಎ.ಚೆನ್ನಪ್ಪ, ಪ್ರಾಧ್ಯಾಪಕರಾದ ಡಾ.ಎಸ್.ಆರ್.ಚನ್ನವೀರಪ್ಪ, ಡಾ. ವೀರೇಶ ಬಡಿಗೇರ, ಡಾ.ಎನ್.ಈರಣ್ಣ, ಉಪನ್ಯಾಸಕರಾದ ಅನ್ನದಾನೇಶ್ವರಿ, ಡಾ.ಕಲ್ಲಯ್ಯ ಹಿರೇಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net