ಶಾಲಾ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಅಥವಾ ಮಾದಕ ವಸ್ತು ಮಾರಾಟ ಕಂಡುಬAದಲ್ಲಿ ತಕ್ಷಣವೇ ಅಂಗಡಿಗಳ ಪರವಾನಗಿ ರದ್ದುಪಡಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ವೈದ್ಯರ ಚೀಟಿ ಇಲ್ಲದೆ ನಿಷೇಧಿತ ಮಾತ್ರೆ ಹಾಗೂ ನೋವು ನಿವಾರಕಗಳನ್ನು ಮಾರುವ ಫಾರ್ಮಸಿಗಳ ಲೈಸೆನ್ಸ್ ಅನ್ನು ತಕ್ಷಣವೇ ರದ್ದುಗೊಳಿಸಲು ಔಷಧಿ ನಿಯಂತ್ರಣ ಇಲಾಖೆಗೆ ಆದೇಶಿಸಿದರು. ಡಾರ್ಕ್ವೆಬ್, ಸೋಷಿಯಲ್ ಮೀಡಿಯಾ ಹಾಗೂ ಕೊರಿಯರ್ ಮೂಲಕ ನಡೆಯುವ ಡ್ರಗ್ಸ್ ನೆಟ್‌ವರ್ಕ್ ತಡೆಯಲು ಸೈಬರ್ ಕ್ರೈಮ್ ಪೊಲೀಸ್ ಘಟಕವು ತೀವ್ರ ನಿಗಾ ಇಡಬೇಕು. ಕೇವಲ ಕಾನೂನು ಕ್ರಮಗಳಷ್ಟೇ ಅಲ್ಲದೆ, ಗ್ರಾಪಂ ಮತ್ತು ವಾರ್ಡ್ ಮಟ್ಟದಲ್ಲಿ ನಾಗರಿಕ ಸಮಿತಿ ರಚಿಸಿ ಜಾಗೃತಿ ಮೂಡಿಸಬೇಕು. ವ್ಯಸನಿಗಳನ್ನು ಪತ್ತೆಹಚ್ಚಿ ಪುನರ್ವಸತಿ ಕಲ್ಪಿಸಬೇಕು. ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರು ಎಷ್ಟೇ ಪ್ರಭಾವಿಯಾಗಿದ್ದರೂ, ಯಾರದ್ದೇ ಒತ್ತಡಕ್ಕೆ ಮಣಿಯದೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದರು.