ರಸ್ತೆ ಕಾಮಗಾರಿ ಗುಣಮಟ್ಟ ಕಾಪಾಡಿ

ಹೊಸಪೇಟೆಯಲ್ಲಿ ಕಲಬುರಗಿಯ ಕೆಕೆಆರ್‌ ಡಿಬಿ ಕಾರ್ಯದರ್ಶಿ  ನಳಿನ್ ಅತುಲ್ ರಸ್ತೆ ಕಾಮಗಾರಿ ಪರಿಶೀಲಿಸಿದರು. ಜಿಪಂ ಸಿಇಒ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಶಾ, ಪಿಡಬ್ಲ್ಯೂಡಿ ಎಇಇ ರವಿನಾಯ್ಕ ಇತರರಿದ್ದರು.
ಹೊಸಪೇಟೆಯಲ್ಲಿ ಕಲಬುರಗಿಯ ಕೆಕೆಆರ್‌ ಡಿಬಿ ಕಾರ್ಯದರ್ಶಿ ನಳಿನ್ ಅತುಲ್ ರಸ್ತೆ ಕಾಮಗಾರಿ ಪರಿಶೀಲಿಸಿದರು. ಜಿಪಂ ಸಿಇಒ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಶಾ, ಪಿಡಬ್ಲ್ಯೂಡಿ ಎಇಇ ರವಿನಾಯ್ಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಆರ್‌ ಡಿಬಿ ಕಾರ್ಯದರ್ಶಿ ನಳಿನ್ ಅತುಲ್ ಅಧಿಕಾರಿಗಳಿಗೆ ತರಾಟೆ
ಹೊಸಪೇಟೆ: ಸರ್ಕಾರ ಜನರ ತೆರಿಗೆ ಹಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಒಮ್ಮೆ ರಸ್ತೆ ನಿರ್ಮಾಣ ಮಾಡಿದರೆ ಕನಿಷ್ಟ ವರ್ಷಗಳು ಬಾಳಿಕೆ ಬರಬೇಕು ಎಂದು ಕಲಬುರಗಿಯ ಕೆಆರ್‌ ಡಿಬಿ ಕಾರ್ಯದರ್ಶಿ ನಳಿನ್ ಅತುಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ನಿರ್ಮಾಣ ಆಗುತ್ತಿರುವ ಜಿಲ್ಲಾ ಆಸ್ಪತ್ರೆ ಬಳಿಯ ರಸ್ತೆ ಕಾಮಗಾರಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಕೆಕೆಆರ್ ಡಿಬಿಯಿಂದ 16.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ನಗರದ ಸಂಡೂರು ರಸ್ತೆಯಿಂದ ಜಂಬುನಾಥ ರಸ್ತೆ ವರೆಗೆ ಹಾಗೂ ಜಿಲ್ಲಾ ಆಸ್ಪತ್ರೆ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ರಸ್ತೆ ಉದ್ದ ಅಗಲ ಹಾಗೂ ಆಳವನ್ನು ಪರಿಶೀಲಿಸಿದ ಕೆಕೆಆರ್‌ ಡಿಬಿ ಆಯುಕ್ತ, ಯೋಜನೆಯಂತೆ ರಸ್ತೆ‌ನಿರ್ಮಾಣ ನಡೆದಿಲ್ಲ. ಶೇ.75ರಷ್ಟು ಮಾತ್ರ ರಸ್ತೆ ಕಾಮಗಾರಿ ನಡೆದಿದೆ. ಈ ರೀತಿ ನಡೆದರೆ ಗುಣಮಟ್ಟದ ಕಾಮಗಾರಿ ಎಂದು ಹೇಳಬೇಕ? ಗುತ್ತಿಗೆದಾರರ ಕೇವಲ ಲಾಭಕ್ಕಾಗಿ ಕಾನಗಾರಿ ನಡೆಸದೇ ಗುಣಮಟ್ಟದ ಕಡೆ ಗಮನ ಹರಿಸಬೇಕು. ಇನ್ನು ಶೇ.25ರಷ್ಟು ಕಾಮಗಾರಿಯಲ್ಲಿ ಕಚ್ಚ ವಸ್ತು ಹಾಕಬೇಕಿತ್ತು. ಕಡಿಮೆ ವೆಚ್ಚದಲ್ಲಿ ಕಾಮಗಾರಿ‌ ಮುಗಿಸುತ್ತಿದ್ದಾರೆ. ಅಧಿಕಾರಿಗಳು ಗುಣಮಟ್ಟವನ್ನು ಪರಿಶೀಲಿಸಲು ಆಗಲ್ವ? ಎಂದು ತರಾಟೆಗೆ ತೆಗೆದುಕೊಂಡ ಆಯುಕ್ತರು, ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net