ಮಹಾಬಲಿ ಪವನಸುತ ನಾಮಸ್ಮರಣೆ

ಹಂಪಿ ಶ್ರೀ ಯಂತ್ರೋಧಾರಕ ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಯಿತು.
ಹಂಪಿ ಶ್ರೀ ಯಂತ್ರೋಧಾರಕ ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾದ್ಯಾಂತ ಹನುಮಾನ್ ಜಯಂತಿ ನಿಮಿತ್ತ ದೇಗುಗಳಲ್ಲಿ ವಿಶೇಷ ಪೂಜಾಕೈಂಕರ್ಯ
ಹೊಸಪೇಟೆ: ಜಿಲಾದ್ಯಾಂತ ಹನುಮ ಜಯಂತಿಯನ್ನು ಸಂಭ್ರಮದಿAದ ಆಚರಿಸಲಾಯಿತು. ನಾನಾ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆಯಿತು. ದೇಗುಲಕ್ಕೆ ಆಗಮಿಸುತ್ತಿರುವ ಭಕ್ತರು ಮಹಾಬಲಿ ಹನುಮಂತನ ನಾಮಸ್ಮರಣೆ ಮಾಡುತ್ತಾ ಪ್ರಾರ್ಥನೆ ನಡೆಯಿತು.
ಹಂಪಿಯ ಶ್ರೀ ಯಂತ್ರೋಧಾರಕ ಹನುಮಾನ್ ದೇಗುಲ, ನಗರದ ಶ್ರೀ ವಡಕರಾಯ ದೇಗುಲ, ಭಟ್ರಳ್ಳಿ ಆಂಜನೇಯ, ಪಂಚಮುಖಿ ದೇಗುಲ ಹಾಗೂ ಮರಿಯಮ್ಮನಹಳ್ಳಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆದವು. ದೇಗುಲUಳಲ್ಲಿ ಆಗಮಿಸಿದ ಭಕ್ತರು ಸಾಲುಗಟ್ಟಿ ನಿಂತು ಆಂಜನೇಯ ಸ್ವಾಮಿ ದರ್ಶನ ಪಡೆದರು. ಹನುಮ ಜಯಂತಿಯAದು ಪವಿತ್ರ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಇತರ ಧಾರ್ಮಿಕ ಕಾರ್ಯಗಳನ್ನು ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ.
ಹನುಮಾನ್ ಜಯಂತಿ ನಿಮಿತ್ತ ನಗರದ ಶ್ರೀ ವಡಕರಾಯ ದೇಗುಲದಲ್ಲಿ ಹನುಮಾನ್ ಮಾಲಾ ಸೇವಾ ಸಮಿತಿಯಿಂದ ಬೆಳಗ್ಗೆಯಿಂದ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ತೊಟ್ಟಿಲು ಸೇವೆ, ಪವಮಾನ ಹೋಮ ನೆರವೇರಿಸಲಾಯಿತು. ನಂತರ ಪಾದಗಟ್ಟಿ ಆಂಜನೇಯದ ವರೆಗೆ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ದೇಗುಲದ ಮುಂದೆ 11 ರಿಂದ 2ರ ವರೆಗೆ ನಿರಂತರ ಹನುಮಾನ್ ಚಾಲಿಸ್ ಪಠಣ ಮಾಡಲಾಯಿತು. ನಂತರ ಮಹಾ ಮಂಗಳಾರತಿ ಮಾಡಿ, ಕೊಸಂಬರಿ ಹಾಗೂ ಪಾನಕ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net