ಅಪಘಾತದ ತೀವ್ರತೆಗೆ ಬೃಹತ್ ರೆಕ್ಕೆ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ, ಹೆದ್ದಾರಿಯಲ್ಲಿ ಸಂಪರ‍್ಣ ಸಂಚಾರ ಸ್ಥಗಿತಗೊಂಡಿದೆ. ಪರಿಣಾಮವಾಗಿ ಕಿಲೋಮೀರ‍್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ತೀವ್ರ ಟ್ರಾಫಿಕ್ ಜಾಮ್ ಉಂಟಾಗಿದೆ. ವಿಶೇಷವಾಗಿ ನಗರದ ಕಡೆಯಿಂದ ಬೆಂಗಳೂರು, ದಾವಣಗೆರೆ ಮರ‍್ಗವಾಗಿ ಸಂಚರಿಸಬೇಕಿದ್ದ ನೂರಾರು ವಾಹನಗಳು ಮುಂದುವರಿಯಲಾರದೆ ಸವಾರರು ತೀವ್ರ ಪರದಾಟ ನಡೆಸುವಂತಾಗಿದೆ.