

ಹೊಸಪೇಟೆ: ಬಿಲ್ ಮಂಜೂರಿಗಾಗಿ ಲಂಚದ ಬೇಡಿಕೆಯಿಟ್ಟಿದ್ದ ಇಲ್ಲಿನ ಲೋಕೋಪಯೋಗಿ ಇಲಾಖೆಯ ಇಇ ದೇವದಾಸ್ ಹಾಗೂ ಅಕೌಂಟೆAಟ್ ಮಾರುತಿ ಮಂಗಳವಾರ ವಿಜಯನಗರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹೂವಿನ ಹಡಗಲಿಯ ದೂರುದಾರ ಮಹೇಶ್ ಹಲಗೇರಿ ಎಂಬುವವರು ಲೋಕೋಪಯೋಗಿ ಇಲಾಖೆಯ ಟೆಂಡರ್ ಮೂಲಕ ಕಾಮಗಾರಿ ಬಿಲ್ ಮಂಜೂರು ಮಾಡಿಕೊಡಲು ಶೇ.10ರಷ್ಟು (ಒಂದು ಲಕ್ಷ ರೂ.) ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಇದರ ಕುರಿತು ವಿಜಯನಗರ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ದಾಳಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ನಗರದ ಇಇ ಕಚೇರಿಯಲ್ಲಿ ದೂರುದಾರರಿಂದ ಒಂದು ಲಕ್ಷ ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಸಚಿನ್ ಎಸ್.ಛಲವಾದಿ, ಪೊಲೀಸ್ ನಿರೀಕ್ಷಕರಾದ ರಾಜೇಶ ಎಸ್.ಲಮಾಣಿ, ಅಮರೇಶ್ ಹುಬ್ಳಿ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ತಂಡದಲ್ಲಿ ಸಿಬ್ಬಂದಿಗಳಾದ ಸುರೇಶ, ರೇಣುಕಪ್ಪ, ಕುಮಾರ ನಾಯ್ಕ, ಚನ್ನಬಸಪ್ಪ, ಕೃಷ್ಣ ಪಾಲ್ಗೊಂಡಿದ್ದರು.