ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ಹಂಪಿ ವ್ಯಾಪ್ತಿಯಲ್ಲಿಅನಧಿಕೃತವಾಗಿ ನಡೆಸುತ್ತಿರುವಎರಡು ಹೋಂಸ್ಟೇ ಮಾಲಿಕರಿಗೆಎಚ್ಚರಿಕೆ ನೀಡಲಾಗಿದೆ. ಬೀಗಮುದ್ರೆ ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಂಪಿ, ಹೊಸಹಂಪಿ, ಕಡ್ಡಿರಾಂಪುರ, ಕಮಲಾಪುರ ಸೇರಿದಂತೆ ಹಲವೆಡೆ ಇಲಾಖೆ ನಿಯಮಾವಳಿಗಳ ವಿರುದ್ಧವಾಗಿ ನಿರ್ಮಾಣಗೊಂಡಿರುವಅಕ್ರಮ ಹೋಮ್ ಸ್ಟೇಗಳನ್ನ ಜಪ್ತಿ ಮಾಡುವಂತೆ ಸೂಚನೆ ನೀಡಲಾಗಿದೆ. ಗ್ರಾಮಪಂಚಾಯಿತಿ, ಪುರಾತತ್ತ್ವ ಇಲಾಖೆ, ಹವಾಮ ಹಾಗೂ ಜಿಲ್ಲಾಡಳಿತದಿಂದ ಎನ್ ಒಸಿ ಪಡೆದು ಪ್ರವಾಸೋದ್ಯಮಇಲಾಖೆಯಆನ್‌ಲೈನ್ ಮೂಲಕ ಅರ್ಜಿ ಹಾಕಬಹುದು. ಇಲ್ಲಿ ದೇಶವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿಕೊಡುತ್ತಾರೆ. ಆದ್ದರಿಂದ ಹಂಪಿಯಲ್ಲಿ ಭದ್ರತೆ ಹಾಗೂ ಸುರಕ್ಷತೆಕಾಪಾಡುವುದು ನಮ್ಮಕರ್ತವ್ಯ. ಆದ್ದರಿಂದ ನಿಯಮ ಬಾಹಿರವಾಗಿ ನಡೆಯುವ ಹೋಂಸ್ಟೇ, ವಸತಿಗೃಹ, ಗೆಸ್ಟ್ ಹೌಸ್ ಗಳ ಮೇಲೆ ನಿಗಾವಹಿಸಲಾಗುವುದುಎಂದರು.