ಶುದ್ಧ ಕಾಯಕದೊಂದಿಗೆ ಜೀವನ ನಡೆಸಿ

ಹರಪನಹಳ್ಳಿ ತಾಲೂಕಿನ ನೀಲಗುಂದ ಗುಡ್ಡದ ಸಂಸ್ಥಾನ ಜಂಗಮ ಪೀಠದಲ್ಲಿ ಜಂಗಮ ಜಾತ್ರೆ ಸ್ಮರಣೋತ್ಸವ ಹಾಗೂ ಆದರ್ಶ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಲಿಂಗನಾಯಕನಹಳ್ಳಿ ಜಂಗಮಕ್ಷೇತ್ರದ ಚನ್ನವೀರ ಶಿವಯೋಗಿ ಸ್ವಾಮೀಜಿ ಮಾತನಾಡಿದರು.
ಹರಪನಹಳ್ಳಿ ತಾಲೂಕಿನ ನೀಲಗುಂದ ಗುಡ್ಡದ ಸಂಸ್ಥಾನ ಜಂಗಮ ಪೀಠದಲ್ಲಿ ಜಂಗಮ ಜಾತ್ರೆ ಸ್ಮರಣೋತ್ಸವ ಹಾಗೂ ಆದರ್ಶ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಲಿಂಗನಾಯಕನಹಳ್ಳಿ ಜಂಗಮಕ್ಷೇತ್ರದ ಚನ್ನವೀರ ಶಿವಯೋಗಿ ಸ್ವಾಮೀಜಿ ಮಾತನಾಡಿದರು.
Published on
ಹರಪನಹಳ್ಳಿ: ಮಠ ಮಾನ್ಯಗಳು ನೊಂದವರನ್ನು ಒಗ್ಗೂಡಿಸಿ ಧರ್ಮದ ಅರಿವು, ಸಂಸ್ಕಾರ, ಶಿಕ್ಷಣವನ್ನು ನಾಡಿಗೆ ಪಸರಿಸುತ್ತಿವೆ ಎಂದು ಲಿಂಗನಾಯಕನಹಳ್ಳಿ ಜಂಗಮಕ್ಷೇತ್ರದ ಚನ್ನವೀರ ಶಿವಯೋಗಿ ಸ್ವಾಮೀಜಿ ತಿಳಿಸಿದರು.
ನೀಲಗುಂದ ಗುಡ್ಡದ ಸಂಸ್ಥಾನ ಜಂಗಮ ಪೀಠದಲ್ಲಿ ಆಯೋಜಿಸಿದ್ದ ಜಂಗಮ ಜಾತ್ರೆ ಸ್ಮರಣೋತ್ಸವ ಹಾಗೂ ಆದರ್ಶ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶನಿವಾರ ಆಶೀರ್ವಚನ ನೀಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ನವ ಜೀವನಕ್ಕೆ ಕಾಲಿಡುವ ಜೋಡಿಗೆ ಗುರು-ಹಿರಿಯರ ಆಶೀರ್ವಾದ ಸಿಗಲಿದೆ. ಇದರೊಂದಿಗೆ ವಧು-ವರರ ಆರ್ಥಿಕ ಹೊರೆ ಕಡಿಮೆಯಾಗಲಿದೆ. ನೂತನ ದಂಪತಿ ಧರ್ಮ, ಸತ್ಯ, ಶುದ್ಧ ಕಾಯಕ ಮಾಡುವ ಮೂಲಕ ಜೀವಿಸಬೇಕು, ಅತ್ತೆ-ಮಾವನೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರು.
ನೀಲಗುಂದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ. ದುಂದುವೆಚ್ಚದ ಕಡಿವಾಣ ಹಾಕುವಲ್ಲಿ ಸಾಮೂಹಿಕ ವಿವಾಹ ಪ್ರಮುಖ ಪಾತ್ರ ವಹಿಸಿವೆ. ಈ ರೀತಿ ವಿವಾಹಗಳು ಹೆಚ್ಚೆಚ್ಚು ವಿವಾಹ ನಡೆಯಬೇಕು, ಪಠಣ ಪ್ರವಚನ ನೀಡಿ ಬಂದ ಹಣದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿತ್ತು. ವೈಚಾರಿಕ ಶಿಕ್ಷಣ ನೀಡುತ್ತಿದ್ದ ಮಠದ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಹೂವಿನಹಡಗಲಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ. ಸಾಮೂಹಿಕ ವಿವಾಹ ಬಡವರ ಮದುವೆ ಅಲ್ಲ, ಭಾಗ್ಯವಂತರ ಮದುವೆಯಾಗಿವೆ, ಮುಂಬರುವ ಪೀಳಿಗೆಗೆ ಸಂಸ್ಕಾರ ನೀಡಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಮಾತನಾಡಿ. ಸಾಮೂಹಿಕ ವಿವಾಹ ಮಾಡುವುದು ಪುಣ್ಯದ ಕೆಲಸವಾಗಿದೆ. ಆರ್ಥಿಕ ಸ್ಥಿತಿವಂತರು ಇಂತಹ ಆದರ್ಶ ಕಾರ್ಯಕ್ರಮ ಮಾಡಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net